ಬಹುದಿನಗಳ ಬೇಡಿಕೆಯ ಬೆಳಗಾವಿಯ ಫ್ಲೈಓವರ್ ನಕಾಶೆ ಸಿದ್ಧ: ಮುಂದಿನ ತಿಂಗಳಿಂದ ಕೆಲಸ ಆರಂಭ

khushihost
ಬಹುದಿನಗಳ ಬೇಡಿಕೆಯ ಬೆಳಗಾವಿಯ ಫ್ಲೈಓವರ್ ನಕಾಶೆ ಸಿದ್ಧ: ಮುಂದಿನ ತಿಂಗಳಿಂದ ಕೆಲಸ ಆರಂಭ
Screenshot

ಬೆಳಗಾವಿ, 31: ನಗರದ ಜನರ ಬಹುದಿನಗಳ ಬೇಡಿಕೆಯ ಫ್ಲೈಓವರ್ ನಕಾಶೆ ಕೊನೆಗೂ ತಯಾರಾಗಿದೆ. ಸಂಕಮ್ ಹೊಟೇಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ನಗರದ ಕೇಂದ್ರ ಸ್ಥಳವಾಗಿರುವ ಚನ್ನಮ್ಮ ವೃತ್ತದವರೆಗೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದ್ದು ಮೊದಲ ಹಂತಕ್ಕೆ 200 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಅದರ ನಕ್ಷೆಯನ್ನು ಈಗ ಬಿಡುಗಡೆ ಮಾಡಲಾಗಿದೆ.

ನಗರದಲ್ಲಿ ಮೇಲ್ಸೇತುವೆ ನಿರ್ಮಾಣವಾದ ನಂತರ ಭಾರೀ ವಾಹನಗಳ ಸಂಚಾರ ಕಡಿಮೆಯಾಗಲಿದೆ. ಸಂಕಮ್ ಹೋಟೆಲನಿಂದ ಅಶೋಕ ವೃತ್ತದವರೆಗೆ, ಆರ್‌ಟಿಒ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣವಾಗಲಿದೆ.
ಬೆಳಗಾವಿ ಲೋಕೋಪಯೋಗಿ ಇಲಾಖೆಯಿಂದ ಚನ್ನಮ್ಮ ವೃತ್ತದಲ್ಲಿ ನಿರ್ಮಣವಾಗಲಿರುವ ಫ್ಲೈಓವರ್‌ನ ನಕ್ಷೆ ಬಿಡುಗಡೆಯಾಗಿದೆ.

ಕೊಲ್ಲಾಪುರ ಸರ್ಕಲ್ ರಸ್ತೆ, ಖಾನಾಪುರ ರಸ್ತೆ ಮತ್ತು ವೆಂಗುರ್ಲಾ ರಸ್ತೆಗೆ ಹೋಗಲು ವ್ಯವಸ್ಥೆ ಮಾಡಲಾಗುತ್ತದೆ.

ನೇರವಾಗಿ ಪ್ರಯಾಣಿಸುವ ವಾಹನಗಳು ನಗರಕ್ಕೆ ಬಾರದೆಯೇ ಪ್ರಯಾಣಿಸಲು ಸಾಧ್ಯವಾಗುತ್ತದೆ. ಏಳೆಂಟು ವರ್ಷಗಳಿಂದ ಸುದ್ದಿಯಲ್ಲಿರುವ ಫ್ಲೈಓವರ್ ಕಾಮಗಾರಿಗೆ ಚಾಲನೆ ಸಿಗುತ್ತಿದ್ದಂತೆ ಬೆಳಗಾವಿ ನಗರದ ಸಂಪೂರ್ಣ ಚಿತ್ರಣವೇ ಬದಲಾಗಲಿದೆ.

ಮೇಲ್ಸೇತುವೆಯ ನಕಾಶೆಯ ಚಿತ್ರಗಳು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

Share This Article