ಮುರುಘಾ ಶ್ರೀಗಳು ನನಗೆ ದೇವರಿದ್ದಂತೆ : ಬಿಜೆಪಿ ನಾಯಕ ಈಶ್ವರಪ್ಪ

khushihost
ಮುರುಘಾ ಶ್ರೀಗಳು ನನಗೆ ದೇವರಿದ್ದಂತೆ : ಬಿಜೆಪಿ ನಾಯಕ ಈಶ್ವರಪ್ಪ

ಶಿವಮೊಗ್ಗ : ತಮ್ಮ ಮಠದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಶಾಲಾ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನನಗೆ ದೇವರಿದ್ದಂತೆ ಎಂದು ರಾಜ್ಯ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶ್ರೀಗಳು ಅಂದರೆ ನನಗೆ ದೇವರಿದ್ದಂತೆ, ಮುರುಘಾ ಶ್ರೀಗಳ ಬಗ್ಗೆ ನನಗೆ ಗೌರವ ಕಡಿಮೆಯಾಗಿಲ್ಲ, ತನಿಖೆ ನಡೆಯುತ್ತಿದ್ದು ಸತ್ಯ ಹೊರಬರುತ್ತೆ ಎಂದು ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

Share This Article