ಕಾಣೆಯಾಗಿದ್ದ ವಿದ್ಯಾರ್ಥಿಗಳ ಶವಗಳು ಪತ್ತೆ

khushihost
ಕಾಣೆಯಾಗಿದ್ದ ವಿದ್ಯಾರ್ಥಿಗಳ ಶವಗಳು ಪತ್ತೆ

ಸುರತ್ಕಲ್, 28:‌ ಶಾಲೆಯಿಂದ ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವಗಳು ಮುಲ್ಕಿ ಸಮೀಪದ ಹಳೆಯಂಗಡಿ ಡ್ಯಾಮ್ ಬಳಿ ಫೆ. 27ರ ಮಂಗಳವಾರ ತಡರಾತ್ರಿ ಪತ್ತೆಯಾಗಿವೆ. ಈಜಲು ಹೋಗಿದ್ದ ವೇಳೆ ವಿದ್ಯಾರ್ಥಿಗಳು ಮುಳುಗಿರುವ ಶಂಕೆ ಇದೆ.

ಖಾಸಗಿ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ 1.30ಕ್ಕೆ ಶಾಲೆಯಿಂದ ಹೊರಗೆ ಹೋಗಿ, ಹಿಂದಿರುಗಿ ಬಾರದೇ ನಾಪತ್ತೆಯಾಗಿದ್ದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಯಶ್ವಿ‌ತ ಚಂದ್ರಕಾಂತ, ನಿರುಪ, ಅನ್ವಿತ ಹಾಗೂ ರಾಘವೇಂದ್ರ ಅವರು ಪ್ರಿಪರೇಟರಿ ಪರೀಕ್ಷೆ ಮುಗಿಸಿ ತೆರಳಿದ್ದವರು ನಾಪತ್ತೆಯಾಗಿದ್ದರು.

Share This Article