ಬೊಮ್ಮಾಯಿ ಎಸ್ಕಾರ್ಟ ವಾಹನ ಪಲ್ಟಿ : ತಾಯಿ, ಮಗಳಿಗೆ ಗಂಭೀರ ಗಾಯ

khushihost
ಬೊಮ್ಮಾಯಿ ಎಸ್ಕಾರ್ಟ ವಾಹನ ಪಲ್ಟಿ : ತಾಯಿ, ಮಗಳಿಗೆ ಗಂಭೀರ ಗಾಯ

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎಸ್ಕಾರ್ಟ ವಾಹನ ಪಲ್ಟಿಯಾಗಿರುವ ಘಟನೆ ಹಿರಿಯೂರು ತಾಲೂಕು ಕಚೇರಿ ಬಳಿ ನಡೆದಿದೆ.

ಹಿರಿಯೂರು ಪಟ್ಟಣದ ನೆಹರು ಮೈದಾನಕ್ಕೆ ಬರುವ ವೇಳೆ ಬೈಕ್ ಒಂದು ಅಡ್ಡ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಕೂಡಲೇ ಗಾಯಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಗಾಯಗೊಂಡಿದ್ದಾರೆ.

ಎಸ್ಕಾರ್ಟ್ ವಾಹನದಲ್ಲಿ ಸಿಪಿಐ ರಮಾಕಾಂತ ಸೇರಿ ಹಲವರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This Article