ಗಾಳಿಪಟ ಹಾರಿಸುವಾಗ ಆಯತಪ್ಪಿ ಬಿದ್ದು ಬಾಲಕನ ಸಾವು 

khushihost
ಗಾಳಿಪಟ ಹಾರಿಸುವಾಗ ಆಯತಪ್ಪಿ ಬಿದ್ದು ಬಾಲಕನ ಸಾವು 

ಬೆಳಗಾವಿ: ಗಾಳಿಪಟ ಹಾರಿಸುವಾಗ ಆಯತಪ್ಪಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಉಜ್ವಲ ನಗರದಲ್ಲಿನ ತಿರಂಗಾ ಕಾಲೋನಿಯಲ್ಲಿ ನಡೆದಿದೆ.

11 ವರ್ಷದ ಅರ್ಮಾನ ದಫೇದಾರ ಮೃತ ಬಾಲಕ. ಉಜ್ವಲ ನಗರದ ಸೆಕೆಂಡ್ ಕ್ರಾಸ್ ನಲ್ಲಿರುವ ತಿರಂಗಾ ಕಾಲೋನಿಯ ಮನೆಯಲ್ಲಿ ಬಾಲಕ ತನ್ನ ಅಣ್ಣನ ಜೊತೆ ಗಾಳಿಪಟ ಹಾರಿಸಲೆಂದು ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ.

ಗಾಳಿಪಟ ಹಾರಿಸುವಾಗ ಕಾಲು ಜಾರಿ ಆಕಸ್ಮಿಕವಾಗಿ ಬಾಲಕ ಕೆಳಗೆ ಬಿದ್ದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Share This Article