ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

khushihost
ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ

ಬೆಳಗಾವಿ :  ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ೨೦೨೧ ನೇ  ಸಾಲಿನ ಬೇರೆ ಬೇರೆ ಸಾಹಿತ್ಯ ಪ್ರಕಾರ ಕೃತಿಗಳನ್ನು ಪ್ರಶಸ್ತಿಗಳಿಗಾಗಿ ಆಹ್ವಾನಿಸಿದೆ.

ಪುಸ್ತಕ ಕಳುಹಿಸಲು ಕೊನೆಯ ದಿನಾಂಕ   ನವೆಂಬರ್ ೨೫  ಇದ್ದು ಲೇಖಕರು, ಸಾಹಿತಿಗಳು, ಕವಿಗಳು ಪ್ರಶಸ್ತಿಗೆ ತಮ್ಮ ೩ ಪ್ರತಿಗಳನ್ನು ಶ್ರೀಮತಿ ನೀರಜಾ ಗಣಾಚಾರಿ ಕಾರ್ಯದರ್ಶಿಗಳು, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ೨೫೫, ವಿಜಯಾ ರೆಸಿಡೆನ್ಸಿ, ಗುರುಪ್ರಸಾದ ಕಾಲೋನಿ, ಮುಖ್ಯ ರಸ್ತೆ , ಟಿಳಕವಾಡಿ ಬೆಳಗಾವಿ – ೦೬  ಈ ವಿಳಾಸಕ್ಕೆ ಕಳುಹಿಸಬೇಕು.

ಕೃತಿಗಳನ್ನು ಕಳುಹಿಸುವವರು ಬೆಳಗಾವಿ ಜಿಲ್ಲೆಯವರೇ ಆಗಿರಬೇಕು. ಪುಸ್ತಕಗಳು 2021 ನೇ ಸಾಲಿನಲ್ಲಿ ಪ್ರಕಟಗೊಂಡಿರಬೇಕು. ಪುಸ್ತಕಗಳನ್ನು ಕಳುಹಿಸುವವರು  ಸಂಪೂರ್ಣ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೇ  ಬರೆದು ನವೆಂಬರ್ ೨೫  ರೊಳಗೆ  ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗಾಗಿ ೯೪೮೧೬೫೬೪೦೫, ೯೮೪೫೫೯೯೧೪೪, ೯೪೪೮೬೩೭೭೯೭ ಗಳಿಗೆ ಸಂಪರ್ಕಿಸ ಬಹುದಾಗಿದೆ.

Share This Article