ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ

khushihost
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ

ನವ ದೆಹಲಿ : ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ಹಲವಾರು ವಾಹನಗಳು ಅವಶೇಷಗಳಡಿ ಹೂತುಹೋಗಿದ್ದು, ಅಪಾರ ಪ್ರಮಾಣದ ಬೆಳೆಹಾನಿಯುಂಟಾಗಿದೆ.

ನೈನಾ ದೇವಿ ವಿಧಾನಸಭಾ ಕ್ಷೇತ್ರದ ನಮ್ಹೋಲ್ ಪ್ರದೇಶದ ಗುತ್ರಹಾನ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಟ್ಟಾರಿ-ಲೇಹ್ ರಸ್ತೆ (NH-3), ಆಟ್-ಸೈಂಜ್ ರಸ್ತೆ (NH-305) ಮತ್ತು ಅಮೃತಸರ-ಭೋಟಾ ರಸ್ತೆ (NH-503A) ಸೇರಿದಂತೆ ಒಟ್ಟು 503 ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article