ಹಾವೇರಿ ಜಿಲ್ಲೆಯಲ್ಲಿ ಕೋಮು ಗಲಭೆ; ಕಲ್ಲು ತೂರಾಟ; ಹಲವರಿಗೆ ಗಾಯ

khushihost
ಹಾವೇರಿ ಜಿಲ್ಲೆಯಲ್ಲಿ ಕೋಮು ಗಲಭೆ; ಕಲ್ಲು ತೂರಾಟ; ಹಲವರಿಗೆ ಗಾಯ

ಹಾವೇರಿ, ೧೪- ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಹಿಂದೂ ಸಂಘಟನೆಗಳು ಮಂಗಳವಾರ ಆಯೋಜಿಸಿದ್ದ ಬೃಹತ್ ಬೈಕ್ ರ್ಯಾಲಿಯ ವೇಳೆ ಗಲಾಟೆ ನಡೆದಿದ್ದು ಕೆಲ ಕಿಡಗೇಡಿಗಳು ಮಸೀದಿ ಮತ್ತು ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಮಾರ್ಚ 9 ರಂದು ನಡೆದಿದ್ದ ಎರಡು ಕೋಮುಗಳ ನಡುವಿನ ಗಲಾಟೆ ಇಂದು ಮುಂದುವರೆದಿದ್ದು, ಬೈಕ್ ರ್ಯಾಲಿ ವೇಳೆ ಕೆಲ ಯುವಕರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದರು. ಇದು ಇನ್ನಷ್ಟು ತ್ವೇಷಮಯ ವಾತಾವರಣಕ್ಕೆ ಕಾರಣವಾಯಿತು.

ಕಾರಂಜಿ ಸರ್ಕಲ್ ನಲ್ಲಿ ನಡೆಯುತ್ತಿದ್ದ ಬೈಕ್ ರ್ಯಾಲಿಯ ಸಮಯದಲ್ಲಿ ಆಟೋ ಚಾಲಕನೊಬ್ಬನನ್ನು ಮನಬಂದಂತೆ ಥಳಿಸಲಾಗಿದ್ದು, ಮಸೀದಿ ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲ ಮಕ್ಕಳು ಹಾಗೂ ಮಹಿಳೆಯರಿಗೆ ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದು, ಹೈ ಆಲರ್ಟ್ ಘೋಷಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಸಂಗೊಳ್ಳಿ ರಾಯಣ್ಣ ಮೂರ್ತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಗಲಾಟೆ ನಡೆದಿತ್ತು. ಕೈಯಲ್ಲಿ ಕಲ್ಲು ಹಿಡಿದು ನಿಂತಿದ್ದ ಯುವಕರು, ಬ್ಯಾರಿಕೇಡ್ ಕಿತ್ತೆಸೆದು ಮೆರವಣಿಗೆಗೆ ಅಡ್ಡಿಪಡಿಸಿದ್ದರು. ಗಲಾಟೆ ನಡೆದಿದ್ದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ಇಂದು ಬೃಹತ್ ಬೈಕ್ ರ್ಯಾಲಿ ನಡೆಸಿದಾಗ ಈ ಘಟನೆಗಳು ನಡೆದವು.

Share This Article