ಕಾಂಗ್ರೆಸ್‌ ಪಕ್ಷದ್ದು ಒಡೆದಾಳುವ ನೀತಿ, ನಮ್ಮದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ -ಮೋದಿ

khushihost
ಕಾಂಗ್ರೆಸ್‌ ಪಕ್ಷದ್ದು ಒಡೆದಾಳುವ ನೀತಿ, ನಮ್ಮದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರ -ಮೋದಿ

ಬೈಲವಾಡ :ಕಾಂಗ್ರೆಸ್‌– ಜೆಡಿಎಸ್ಸರ್ಕಾರಗಳ ಕಾರಣ ಪ್ರಾದೇಶಿಕ ಅಸಮತೋಲನ ರೂಪ ತಾಳಿದೆ. ಯುವಜನರು ತಮ್ಮ ಭವಿಷ್ಯ ಭದ್ರ ಮಾಡಿಕೊಳ್ಳಲು ಇಂಥ ಅಡ್ಡದಾರಿ ಸರ್ಕಾರಕ್ಕೆ ಅವಕಾಶ ಕೊಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಅವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಕ್ರಾಸ್ನಲ್ಲಿ ಬುಧವಾರ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಕಾಂಗ್ರೆಸ್ಗೆ ಮತ ನೀಡಿದರೆ ಮತ್ತೆ ಶಾರ್ಟ್ಕಟ್ಸರ್ಕಾರ ಬರುತ್ತದೆ. ಇಂಥ ಶಾರ್ಟಕಟ್ಸರ್ಕಾರಗಳಿಂದ ಜಾತಿಗಳ ಮಧ್ಯೆ, ಶ್ರೀಮಂತರುಬಡವರ ಮಧ್ಯೆ, ನಗರಹಳ್ಳಿಗಳ ಮಧ್ಯೆ ಕಂದಕ ಸೃಷ್ಟಿ ಆಗುತ್ತದೆ. ಒಡೆದಾಳುವ ನೀತಿಯಿಂದ ಕಾಂಗ್ರೆಸ್ಗೆ ಕೆಲ ವರ್ಷ ಲಾಭವಾಯಿತು. ಆದರೆ, ಬಿಜೆಪಿ ಸರ್ಕಾರ ಬಂದ ತಕ್ಷಣವೇಸಬ್ಕಾ ಸಾಥ್‌, ಸಬ್ಕಾ ವಿಕಾಸ್‌’ ಮಂತ್ರ ಶುರುವಾಯಿತು ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ನಾಯಕರಿದ್ದಾರೆ. ಆದರೆ, ಎಲ್ಲರ ರಿಮೋಟ್ಕಂಟ್ರೋಲ್ದೆಹಲಿಯ ಶಾಹಿ ಪರಿವಾರದ ಕೈಯಲ್ಲಿದೆ. ಜೆಡಿಎಸ್ಒಂದೇ ಪರಿವಾರ ಪ್ರೈವೇಟ್ಲಿಮಿಡೆಟ್ಕಂಪನಿಯಾಗಿದೆ. ಕಂಪನಿ ಅವರ ಪರಿವಾರವನ್ನಷ್ಟೇ ಸಾಕುತ್ತಿದೆ. ಆದರೆ, ಮೋದಿಗೆ ಇಡೀ ಕರ್ನಾಟಕವೇ ಪರಿವಾರ ಎಂದರು.

ತಮ್ಮ ತಂದೆತಾಯಿ ಎಷ್ಟು ಕಷ್ಟದ ಬದುಕು ಸಾಗಿಸಿದರು ಎಂದು ಯುವಜನರು ನೆನೆಪಿಸಿಕೊಳ್ಳಿ. ಕಾಂಗ್ರೆಸ್ಸರ್ಕಾರ ತಂದಿಟ್ಟ ದುರ್ಗತಿಯನ್ನು ಸ್ಮರಿಸಿರಿ. ಆದರೆ, ನಿಮ್ಮ ಪಾಲಕರಂತೆ ನೀವೂ ಕಷ್ಟ ಅನುಭವಿಸುವುದಕ್ಕೆ ಮೋದಿ ಬಿಡುವುದಿಲ್ಲ. ಮಹಾತ್ವಾಕಾಂಕ್ಷಿ ಬದುಕು ನಿಮ್ಮದಾಗಲಿದೆ ಎಂದೂ ಭರವಸೆ ನೀಡಿದರು. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ವಿವಿಧ 12 ಕ್ಷೇತ್ರಗಳ ಅಭ್ಯರ್ಥಿಗಳು, ಮುಖಂಡರು ವೇದಿಕೆ ಮೇಲಿದ್ದರು.

Share This Article