ಬಾರ್ ಮಾಲೀಕರಿಂದ ಹಣ ವಸೂಲಿ : ಸಿಪಿಐ ಸಸ್ಪೆಂಡ್

khushihost
ಬಾರ್ ಮಾಲೀಕರಿಂದ ಹಣ ವಸೂಲಿ : ಸಿಪಿಐ ಸಸ್ಪೆಂಡ್

ವಿಜಯಪುರ: ಬಾರ್ ಮಾಲೀಕರಿಂದ ಹಣ ವಸೂಲಿಗೆ ಮುಂದಾಗಿದ್ದ ಮುದ್ದೇಬಿಹಾಳದ ಅಬಕಾರಿ ಸಿಪಿಐ ಅವರನ್ನು ಅಮಾನತು ಮಾಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮುದ್ದೇಬಿಹಾಳದ ಅಬಕಾರಿ ಸಿಪಿಐ ಜ್ಯೋತಿ ಮೇತ್ರಿ ಸಸ್ಪೆಂಡ್ ಆಗಿರುವ ಅಧಿಕಾರಿ. ಸಿಪಿಐ ಜ್ಯೋತಿ ಬಾರ್ ಮಾಲೀಕರೊಂದಿಗೆ ಡೀಲ್ ಮಾಡಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕೊಡೋದು ಕೊಡಿ, ಇಲ್ಲದಿದ್ರೆ ಚೆನ್ನಾಗಿರಲ್ಲ ಎಂದು ಸಿಪಿಐ ಬೆದರಿಕೆ ಹಾಕಿದ್ದರು. ಬಾರಗಳಿಂದ ತಲಾ 15,000 ಬೇಡಿಕೆಯಿಟ್ಟಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಿಪಿಐ ಜ್ಯೋತಿ ಅವರನ್ನು ಅಮಾನತು ಮಾಡಿ ಬೆಂಗಳೂರು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

Share This Article