ಡ್ಯಾಮ್ ಗಳು ಅವರ ತಾತನದಲ್ಲ -ಕಾರಜೋಳ

khushihost
ಡ್ಯಾಮ್ ಗಳು ಅವರ ತಾತನದಲ್ಲ -ಕಾರಜೋಳ

ಬೆಳಗಾವಿ: ಕರ್ನಾಟಕಕ್ಕೆ ಮಹಾರಾಷ್ಟ್ರ ಡ್ಯಾಮ್ ಗಳಿಂದ ನೀರು ಬಿಡದಂತೆ ಎನ್ ಸಿಪಿ ಶಾಸಕ ಜಯಂತ ಪಾಟೀಲ ಹೇಳಿದ್ದಾರೆ. ಅಲ್ಲದೇ ಡ್ಯಾಮ್ ಗಳನ್ನು ಎತ್ತರಿಸುವ ಮೂಲಕ ನೀರು ತಡೆ ಹಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದನ್ನು ಕರ್ನಾಟಕ ಖಂಡಿಸಿದೆ.

ಡ್ಯಾಮ್ ಗಳನ್ನು ಎತ್ತರ ಮಾಡಲು ಡ್ಯಾಮ್ ಅವರ ತಾತನ ಮನೆಯದ್ದಲ್ಲ, ನ್ಯಾಯಯುತವಾಗಿ ನೀರು ಹಂಚಿಕೆ ಮಾಡಬೇಕಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಹೇಳಿದರು.

ನಮಗೆ ಸಿಗಬೇಕಾದ ನೀರು ನ್ಯಾಯಯುತವಾಗಿ ಸಿಗುತ್ತದೆ. ನೀರು ಹಂಚಿಕೆ ಬಂದ್ ಮಾಡಲು ಯಾರಿಗೂ ಅಧಿಕಾರವಿಲ್ಲ. ಮಹಾರಾಷ್ಟ್ರ ಸರ್ಕಾರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

Share This Article