ಹಿರಿಯ ಪತ್ರಕರ್ತ ಮುಲ್ಲಾ ಅವರ ಪುತ್ರ ಡಾ. ನೌಷಾದ ವಿಧಿವಶ

khushihost
ಹಿರಿಯ ಪತ್ರಕರ್ತ ಮುಲ್ಲಾ ಅವರ ಪುತ್ರ ಡಾ. ನೌಷಾದ ವಿಧಿವಶ

ಬೆಳಗಾವಿ : ಹಿರಿಯ ಪತ್ರಕರ್ತ ಮೈನುದ್ದಿನ ಮುಲ್ಲಾ ಅವರ ಪುತ್ರ ಡಾ. ಮಹ್ಮದ ಹುಸೇನ ಅಲಿಯಾಸ್ ನೌಶಾದ ಮುಲ್ಲಾ ಅವರು ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಹಿಂಡಲಗಾ ರಸ್ತೆಯಲ್ಲಿರುವ ವಿಜಯನಗರದ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಹೋಮಿಯೋಪತಿ ವೈದ್ಯರಾಗಿದ್ದ ಅವರಿಗೆ 32 ವರುಷ ವಯಸಾಗಿತ್ತು. ಜಿಲ್ಲಾ ಆಸ್ಪತ್ರೆ ಎದುರಿರುವ ನೂರಾಣಿ ಮಸ್ಜಿದ್ ಸಮಾಧಿಯಲ್ಲಿ ಬುಧವಾರ 12ಗಂಟೆಗೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ರಾತ್ರಿ ಊಟ ಮಾಡಿ ಕುಟುಂಬದ ಸದಸ್ಯರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಅವರಿಗೆ ತೀವ್ರ ಹೃದಯಾಘಾತವಾಗಿದೆ. ವೈದ್ಯರಾಗಿರುವ ಅವರ ಸಹೋದರಿ ಅವರನ್ನು ಪರೀಕ್ಷಿಸಿ ತಕ್ಷಣ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗೆ ನೌಶಾದ ಕೊನೆಯುಸಿರೆಳೆದಿದ್ದರು.

ಅತ್ಯುತ್ತಮ ವೈದ್ಯರಾಗಿದ್ದ ನೌಶಾದ ವೈದ್ಯಕೀಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಹೊಂದಿದ್ದರು. ಅವರ ತಂದೆ ಮೈನುದ್ದಿನ ಮುಲ್ಲಾ ಅವರು ಪುಢಾರಿ, ಸಕಾಳ ಮರಾಠಿ ದಿನ ಪತ್ರಿಕೆಗಳಲ್ಲಿ ದಶಕಗಳ ಕಾಲ ಬೆಳಗಾವಿಯಿಂದ ವರದಿಗಾರರೆಂದು ಸೇವೆ ಸಲ್ಲಿಸಿ ಈಗ “ವಿಶಾಲ ಭಾರತ” ಎಂಬ ಇಂಗ್ಲೀಷ ವಾರ ಪತ್ರಿಕೆಯನ್ನು ನಡೆಸುತ್ತಿದ್ದಾರೆ.

Share This Article