ಮೌಲ್ಯಮಾಪನದ ವೇಳೆ ಕರ್ತವ್ಯ ಲೋಪ : 9 ಅಧ್ಯಾಪಕರ ಅಮಾನತು 

khushihost
ಮೌಲ್ಯಮಾಪನದ ವೇಳೆ ಕರ್ತವ್ಯ ಲೋಪ : 9 ಅಧ್ಯಾಪಕರ ಅಮಾನತು 

ಬೆಂಗಳೂರು : 2022ರ ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ತಪ್ಪು ಮೌಲ್ಯಮಾಪನಕ್ಕಾಗಿ ಸರ್ಕಾರಿ ಪಿಯು ಕಾಲೇಜುಗಳ ಒಂಭತ್ತು ಅಧ್ಯಾಪಕರನ್ನು ಅಮಾನತುಗೊಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ತಪ್ಪು ಮಾಡಿದ ಖಾಸಗಿ ಅನುದಾನರಹಿತ ಕಾಲೇಜಿನ ಒಬ್ಬ ಬೋಧಕನ ವಿರುದ್ಧ ಶಿಸ್ತು ಕ್ರಮಕ್ಕೆ ಇಲಾಖೆ ನಿರ್ದೇಶನ ನೀಡಿದೆ.

10 ಅಧ್ಯಾಪಕರ ಪೈಕಿ, ತಲಾ ಐದು ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಿಗೆ ಸೇರಿದವುಗಳಾಗಿವೆ. ಅಮಾನತು ಆದೇಶದ ಪ್ರಕಾರ, ಉತ್ತರ ಪತ್ರಿಕೆಗಳ ಕೊನೆಯ ಕೆಲವು ಪುಟಗಳನ್ನು ಮೌಲ್ಯಮಾಪನ ಮಾಡಲು ಅಧ್ಯಾಪಕರು ವಿಫಲರಾಗಿದ್ದಾರೆ.

ಮೌಲ್ಯಮಾಪಕರ ಜೊತೆಗೆ, ಉಪ ಮೌಲ್ಯಮಾಪಕರಾಗಿ ನಿಯೋಜನೆಗೊಂಡಿದ್ದ ಅಧ್ಯಾಪಕರನ್ನು ಸಹ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Share This Article