ಪತ್ನಿ ಸಾವಿನಿಂದ ಕಂಗಾಲಾದ ಪತಿಯಿಂದ ಘೋರ ಕೃತ್ಯ: ಪುತ್ರನ ಕೊಂದು ಆತ್ಮಹತ್ಯೆ

khushihost
ಪತ್ನಿ ಸಾವಿನಿಂದ ಕಂಗಾಲಾದ ಪತಿಯಿಂದ ಘೋರ ಕೃತ್ಯ: ಪುತ್ರನ ಕೊಂದು ಆತ್ಮಹತ್ಯೆ

ಬಳ್ಳಾರಿ: ಪತ್ನಿ ಸಾವಿನಿಂದ ಕಂಗಾಲಾದ ವ್ಯಕ್ತಿಯೊಬ್ಬ ತನ್ನ 5 ವರ್ಷದ ಮಗನನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ನಡೆದಿದೆ.

ಈಡಿಗೇರ್ ಯಂಕಪ್ಪ(32) ಹಾಗೂ ಅವರ ಪುತ್ರ ವಿಜಯ ಪ್ರಕಾಶ್(5) ಮೃತಪಟ್ಟವರು. ಸೆ. 14ರಂದು ಕೊಳಗಲ್ ಸಮೀಪ ಹೆಚ್.ಎಲ್.ಸಿ. ಕಾಲುವೆಗೆ ಆಟೋ ಪಲ್ಟಿಯಾಗಿ ಯಂಕಪ್ಪನ ಪತ್ನಿ ಹುಲಿಗೆಮ್ಮ ನೀರು ಪಾಲಾಗಿದ್ದರು.

ನಿಧನದಿಂದ ಯಂಕಪ್ಪ ನೊಂದುಕೊಂಡಿದ್ದರು. ಅವರಿಗೆ ದಿಕ್ಕು ತೋಚದಂತಾಗಿತ್ತು. ಮಾನಸಿಕವಾಗಿ ಕಂಗೆಟ್ಟ ವೆಂಕಪ್ಪ ಆತ್ಮಹತ್ಯೆಗೆ ಕೆಲವು ದಿನಗಳ ಹಿಂದೆ ವಿಫಲ ಯತ್ನ ನಡೆಸಿದ್ದರು. ಮಂಗಳವಾರ ಮನೆಯಲ್ಲಿ ನೀರಿನ ಟಬ್ ನಲ್ಲಿ ಕಿರಿಯ ಮಗ ವಿಜಯ್ ಪ್ರಕಾಶ್ ನನ್ನು ಮುಳುಗಿಸಿದ್ದಾರೆ. ಉಸಿರುಗಟ್ಟಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ನಂತರ ಯಂಕಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಟವಾಡಲು ಹೋಗಿದ್ದ ಮತ್ತೊಬ್ಬ ಮಗ ಸಂದೀಪ್ ಪಾರಾಗಿದ್ದಾನೆ.

Share This Article