ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಿ: ಡಿಕೆಶಿ

khushihost
ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಿ: ಡಿಕೆಶಿ

ಬೆಂಗಳೂರು : ಪ್ರಚೋದನಕಾರಿ ಚಟುವಟಿಕೆಗೆ ಕಾರಣವಾಗುವ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಎಲ್ಲ ಸಂಘಟನೆಗಳನ್ನೂ ನಿಷೇಧಿಸಬೇಕು, ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷ ಇಂತಹದೇ ಬೇಡಿಕೆಗಳನ್ನು ಇಟ್ಟಿದೆ ಎಂದು ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ ಆಗ್ರಹಿಸಿದ್ದಾರೆ.

ಪಿಎಫ್ಐ ಆಗಲಿ ಅಥವಾ ಆರ್ ಎಸ್ ಎಸ್ ಆಗಲಿ, ಸಮಾಜದ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು.

ಬೇರೆ ಸಮಾಜದವರ ಮನಸ್ಸನ್ನು ನೋಯಿಸುವಂತಹ ಸಂಘಟನೆಗಳನ್ನೂ ನಿಷೇಧಿಸಬೇಕು ಎಂದು ಡಿಕೆ ಶಿವಕುಮಾರ ಹೇಳಿದ್ದಾರೆ.

Share This Article