ಡಾ. ಮಲ್ಲಿಕಾರ್ಜುನ ಡೋಣಿ ನಿಧನ

khushihost
ಡಾ. ಮಲ್ಲಿಕಾರ್ಜುನ ಡೋಣಿ ನಿಧನ

ಬೆಳಗಾವಿ, ಅಗಸ್ಟ 16 : ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಲ್ಲಿಕಾರ್ಜುನ ಡೋಣಿ ಅವರು  ಶುಕ್ರವಾರ 16ರಂದು ಸುಮಾರು 10:30 ಗಂಟೆಗೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮಹಾಂತೇಶ ನಗರದ ನಿವಾಸಿ ಹಾಗೂ ನಗರ ಸೇವಕ ರಾಜಶೇಖರ ಡೋಣಿಯವರ ತಂದೆಯವರಾದ ದಿವಂಗತರು, ಪತ್ನಿ, ಮೂವರು ಗಂಡು ಮಕ್ಕಳು, 5 ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅವರು  ಅಗಲಿದ್ದಾರೆ.

ನಗರಸೇವಕ ಹನುಮಂತ ಕೊಂಗಾಲಿ ಅವರು ಡಾ.ಮಲ್ಲಿಕಾರ್ಜುನ ಡೋಣಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Share This Article