ಹೆಣ್ಣು ಮಕ್ಕಳನ್ನು ಸುತ್ತಿಗೆಯಿಂದ ಥಳಿಸಿದ ಕುಡುಕ ತಂದೆ; ಓರ್ವ ದುರ್ದೈವಿ ಮಗಳ ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

khushihost
ಹೆಣ್ಣು ಮಕ್ಕಳನ್ನು ಸುತ್ತಿಗೆಯಿಂದ ಥಳಿಸಿದ ಕುಡುಕ ತಂದೆ; ಓರ್ವ ದುರ್ದೈವಿ ಮಗಳ ಸಾವು, ಇನ್ನೋರ್ವಳ ಸ್ಥಿತಿ ಗಂಭೀರ

ಮೈಸೂರು: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ ಮಕ್ಕಳ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮಗಳನ್ನೇ ಬಲಿ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

13 ವರ್ಷದ ಕುಸುಮಾ ಮೃತ ಬಾಲಕಿ. ಉದ್ಬೂರು ತಾಲೂಕಿನ ಸ್ವಾಮಿನಾಯಕ ಎಂಬವನೇ ಮಗಳನ್ನೇ ಕೊಂದ ರಾಕ್ಷಸ. ನವೆಂಬರ್ 17ರಂದು ರಾತ್ರಿ ಕುಡಿದು ಬಂದು ಪತ್ನಿಯ ಜೊತೆ ಸ್ವಾಮಿನಾಯಕ ಜಗಳವಾಡುತ್ತಿದ್ದ. ಇದಕ್ಕೆ ಪತ್ನಿ ಗೀತಾ ಬೈದು ಬುದ್ಧಿ ಹೇಳಿದ್ದಾಳೆ. ಆಗ ಕೋಪದಿಂದ ಮಕ್ಕಳಿಬ್ಬರ ಮೇಲೆ ಸ್ವಾಮಿನಾಯಕ ಸುತ್ತಿಗೆಯಿಂದ ಮನಬಂದಂತೆ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದ.

ಕುಸುಮಾ ಹಾಗೂ ಧನುಶ್ರೀ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕುಸುಮಾ ಸಾವನ್ನಪ್ಪಿದ್ದಾಳೆ. ಗಂಭೀರ ಸ್ಥಿತಿಯಲ್ಲಿರುವ ಇನ್ನೋರ್ವ ಮಗಳು ಧನುಶ್ರೀಗೆ ಚಿಕಿತ್ಸೆ ಮುಂದುವರೆದಿದೆ.

Share This Article