ಮುಸ್ಲಿಂ ಸಮಾಜದ ಹಿರಿಯರು ಹಾಗೂ ಶಿಕ್ಷಣ ತಜ್ಞರಾದ ಡಿ.ಯು ಅತ್ತಾರ ನಿಧನ ಶನಿವಾರ ಅಂತ್ಯಕ್ರಿಯೆ

khushihost
ಮುಸ್ಲಿಂ ಸಮಾಜದ ಹಿರಿಯರು ಹಾಗೂ ಶಿಕ್ಷಣ ತಜ್ಞರಾದ ಡಿ.ಯು ಅತ್ತಾರ ನಿಧನ ಶನಿವಾರ ಅಂತ್ಯಕ್ರಿಯೆ

ಗೋಕಾಕ : ಗೋಕಾಕ ಮುಸ್ಲಿಂ ಸಮಾಜದ ಹಿರಿಯರು ಹಾಗೂ ತಂಜೀಂ ಎಜುಕೇಷನ್‌ ಸೊಸೈಟಿಯ ಮಾಜಿ ನಿರ್ದೇಶಕ ಡಿ.ಯು ಅತ್ತಾರ (80)ಅವರು ಶುಕ್ರವಾರ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಅವರಿಗೆ ಇಬ್ಬರು ಪುತ್ರರು, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳು ಇದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 10 ಗಂಟೆಗೆ ನೆರವೇರಲಿದೆ.

ಸಂತಾಪ: ತಂಜೀಂ ಎಜುಕೇಶನ್ ಸೊಸೈಟಿಯ ಮಾಜಿ ನಿರ್ದೇಶಕ ಯು.ಡಿ. ಅತ್ತಾರ ಅವರ ನಿಧನಕ್ಕೆ ಸಮದರ್ಶಿ ಪತ್ರಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪತ್ರಿಕೆ ಶೋಕ ವ್ಯಕ್ತಪಡಿಸಿದೆ.

Share This Article