ಸತೀಶ ಜಾರಕಿಹೊಳಿ ಸೇರಿ ಎಂಟು ಜನ ಸಚಿವರಾಗಿ ಇಂದು ಪ್ರಮಾಣ ವಚನ

khushihost
ಸತೀಶ ಜಾರಕಿಹೊಳಿ ಸೇರಿ ಎಂಟು ಜನ ಸಚಿವರಾಗಿ ಇಂದು ಪ್ರಮಾಣ ವಚನ

ಬೆಂಗಳೂರು : ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮತ್ತು ಎಂಟು ಶಾಸಕರು ಮಾತ್ರ ಮೊದಲ ಹಂತದ ಮಂತ್ರಿ ಮಂಡಲದಲ್ಲಿ ಸ್ಥಾನ ಪಡೆಯಲಿದ್ದಾರೆ.

ಹಿರಿಯ ಸದಸ್ಯರಾದ ಜಿ ಪರಮೇಶ್ವರ, ಕೆ ಜೆ ಜಾರ್ಜ, ಸತೀಶ ಜಾರಕಿಹೊಳಿ ಸೇರಿದಂತೆ ಉಳಿದವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಿದ್ದರಾಮಯ್ಯ ನವರ ಆಪ್ತ ಜಮೀರ ಅಹ್ಮದ ಖಾನ್ ಅವರನ್ನು ಮಂತ್ರಿ ಮಂಡಳದಲ್ಲಿ ತೆಗೆದುಕೊಳ್ಳುವುದು ಬೇಡ ಎಂದು ಶಿವಕುಮಾರ ನಿಲುವು ಹೊಂದಿದ್ದರು ಎನ್ನಲಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದ ಮೇರೆಗೆ ಕಾಂಗ್ರೆಸ್ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೊದಲ ಹಂತದ ಮಂತ್ರಿ ಮಂಡಳದ ಲಿಸ್ಟ ರವಾಣಿಸಿದ್ದಾರೆ ಎನ್ನಲಾಗಿದೆ.

Share This Article