ಈಶ್ವರಪ್ಪ ನೋಟು ಬಿಡುಗಡೆ ಮಾಡಿ ಕಾಂಗ್ರೆಸ್ ವ್ಯಂಗ್ಯ 

khushihost
ಈಶ್ವರಪ್ಪ ನೋಟು ಬಿಡುಗಡೆ ಮಾಡಿ ಕಾಂಗ್ರೆಸ್ ವ್ಯಂಗ್ಯ 

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ. ಪಾವತಿಸುವಾಗ ಆಪರೇಷನ್ ಕಮಲಕ್ಕೆ 500 ಕೋಟಿ ರೂ. ಹೆಚ್ಚಲ್ಲ ಅಲ್ಲವೇ ಎಂದು ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಫೋಟೋ ಹಾಕಿ ಕರೆನ್ಸಿ ನೋಟೊಂದನ್ನು ರಾಜ್ಯ ಕಾಂಗ್ರೆಸ್ ಸಿದ್ದಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಶಾಸಕ ಸಂಗಮೇಶ್​ಗೆ 500 ಕೋಟಿ ರೂ. ಆಫರ್​ ನೀಡಿದ್ದೇನೆ ಎಂಬ ಈಶ್ವರಪ್ಪ ಅವರ ಹೇಳಿಕೆ ಹಿನ್ನೆಲೆ ಕಾಂಗ್ರೆಸ್ ಈ ರೀತಿಯಾಗಿ ವ್ಯಂಗ ಮಾಡಿದೆ.

ಈಶ್ವರಪ್ಪ ಅವರೇ, ನೋಟ್ ಎಣಿಸುವ ಮೆಷಿನ್ ಇಟ್ಟಿದ್ದು ಆಪರೇಷನ್ ಕಮಲದ 500 ಕೋಟಿ ಎಣಿಸುವುದಕ್ಕಾ, 40% ಕಮಿಷನ್ ಲೂಟಿಯ ಹಣ ಎಣಿಸುವುದಕ್ಕಾ? 500 ಕೋಟಿ ಹೂಡಿಕೆ ಹಿಂತೆಗೆಯಲೆಂದೇ ಸಂತೋಷ ಪಾಟೀಲ ಜೀವ ತೆಗೆದಿರಾ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

Share This Article