ಬೆಳಗಾವಿ ಎಸ್ ಪಿ ಹೆಸರಿನಲ್ಲಿ ನಕಲಿ ಇನ್ಸಸ್ಟಾಗ್ರಾಂ : ಹಣಕ್ಕೆ ಬೇಡಿಕೆ 

khushihost
ಬೆಳಗಾವಿ ಎಸ್ ಪಿ ಹೆಸರಿನಲ್ಲಿ ನಕಲಿ ಇನ್ಸಸ್ಟಾಗ್ರಾಂ : ಹಣಕ್ಕೆ ಬೇಡಿಕೆ 

ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರ ಹೆಸರಿನಲ್ಲಿ ನಕಲಿ ಇನಸ್ಟಾಗ್ರಾಂ ಖಾತೆ ತೆರೆದು ಕಿಡಗೇಡಿಗಳು ಹಣ ಬೇಡಿಕೆ ಇಟ್ಟಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಸಂಜೀವ ಪಾಟೀಲ ಅವರು ಮನವಿ ಮಾಡಿದ್ದಾರೆ.

ಸಂಜೀವ ಪಾಟೀಲ ಹೆಸರಿನಲ್ಲಿ ಸ್ನೇಹಿತರಿಗೆ , ಪರಿಚಯಸ್ಥರಿಗೆ ಹಣ ಕೇಳಲಾಗುತ್ತಿದೆ. ಈ ವರೆಗೆ ಅನೇಕರಿಗೆ ಹಣ ಕೇಳಿ ಗೂಗಲ್ ಪೇ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಸ್ .ಪಿ ಸಂಜೀವ ಪಾಟೀಲ ಅವರ ಗಮನಕ್ಕೆ ವಿಷಯ ಬಂದ ಕೂಡಲೇ ಇದನ್ನು ತಿರಸ್ಕರಿಸುವಂತೆ ಕೋರಿದ್ದಾರೆ.

ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಯಾರೋ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದುದ್ದ ಕಂಡು ಬಂದಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.

Share This Article