ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

khushihost
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಭಾರತ ಜೋಡೋ ಯಾತ್ರೆಯ ವಿಡಿಯೋಗಳಿಗೆ ಕೆಜಿಎಫ್ ಚಿತ್ರದ ಹಾಡಿನ ಮ್ಯೂಸಿಕ್ ಬಳಸಿದ ಆರೋಪ ಹಿನ್ನೆಲೆಯಲ್ಲಿ ಸಂಸದ ರಾಹುಲ್ ಗಾಂಧಿ ಮೂವರು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಭಾರತ ಜೋಡೋ ಯಾತ್ರೆಗೆ ಕೆಜಿಎಫ್ ಸಿನಿಮಾ ಮ್ಯೂಸಿಕ್ ಬಳಸಿದ ಹಿನ್ನೆಲೆಯಲ್ಲಿ ಕಾಪಿ ರೈಟ್ಸ್ ಉಲ್ಲಂಘನೆಯಾಗಿದ್ದು, ಕಾಂಗ್ರೆಸ್ ವಿರುದ್ಧ ಎಂ.ಆರ್.ಟಿ ಸಂಸ್ಥೆ ಕಾನೂನು ಹೋರಾಟಕ್ಕೆ ಮುಂದಾಗಿದೆ.

ಸಂಸ್ಥೆಯ ಅನುಮತಿ ಇಲ್ಲದೇ ಕೆಜಿಎಫ್ ಸಿನಿಮಾ ಸಂಗೀತವನ್ನು ಬಳಸಿಕೊಂಡಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ ಜೋಡೋ ಉಸ್ತುವಾರಿ ಜೈರಾಮ ರಮೇಶ ವಿರುದ್ಧ ದೂರು ದಾಖಲಾಗಿದೆ.

ಪ್ರಕರಣ ಸಂಬಂಧ ಕೋರ್ಟ ನಿರ್ದೇಶನದ ಮೇರೆಗೆ ಯಶವಂತಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.

Share This Article