ಬೆಳಗಾವಿ ರಾಮತೀರ್ಥ ನಗರದಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ

khushihost
ಬೆಳಗಾವಿ ರಾಮತೀರ್ಥ ನಗರದಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ

ಬೆಳಗಾವಿ, ೧೪- ಬೆಳಗಾವಿಯ ರಾಮತೀರ್ಥ ನಗರ ಕ್ರಿಕೆಟ್‌ ಸ್ಟೇಡಿಯಮ್‌ ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹೊಸದಾಗಿ ನಿರ್ಮಿಸಲಾದ ಟಾಯರ್‌ ಅಂಗಡಿಯೊಂದು ಸಂಪೂರ್ಣ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಬೆಲೆಯ ಟಾಯರ್‌ ಗಳು ಹಾಗು ಮಶೀನರಿಗಳು ಬೆಂಕಿಗೆ ಆಹುತಿಯಾದ ಘಟನೆ ಜರುಗಿದೆ.

ಬೆಂಕಿ ಹತ್ತಿದ ನಂತರ ಅಗ್ನಿಶಾಮಕದ ವಾಹನವೊಂದು ಆಗಮಿಸಿತಾದರೂ ಅರ್ಧದಲ್ಲೇ ನೀರು ಮುಗಿಯಿತು. ಆಗ ಪಕ್ಕದ ಕಟ್ಟಡಗಳ ಬೋರ್‌ ನಿಂದ ಅಗ್ನಿ ಆರಿಸಲು ಪ್ರಯತ್ನ ನಡೆಸಲಾಯಿತು. ನಂತರ ಇನ್ನೊಂದು ಅಗ್ನಿಶಾಮಕ ವಾಹನ ಬಂದು ಬೆಂಕಿಯನ್ನು ಸಂಪೂರ್ಣ ನಂದಿಸಿತು.

Share This Article