ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆ ದಿಕ್ಸೂಚಿಯಲ್ಲ : ಸಚಿವ ರೆಡ್ಡಿ

khushihost
ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆ ದಿಕ್ಸೂಚಿಯಲ್ಲ : ಸಚಿವ ರೆಡ್ಡಿ

ಬೆಳಗಾವಿ, ೪:  ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಬೆಳಗಾವಿಯಲ್ಲಿ ಸೋಮವಾರದಿಂದ ಜರುಗಲಿರುವ ವಿಧಾನ ಮಂಡಳ ಅಧಿವೇಶನದಲ್ಲಿ  ಉತ್ತರ ಕರ್ನಾಟಕದ ಜತೆಗೆ ರಾಜ್ಯದ ಎಲ್ಲಾ ವಿಚಾರಗಳು ಚರ್ಚೆಗೆ ಬರುತ್ತವೆ. ಈ ಭಾಗದ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ವಿಚಾರಕ್ಕೆ ಉತ್ತರಿಸಿದ ಅವರು, ಬಿಜೆಪಿಯವರ ಹತ್ತಿರ ಸಂಪನ್ಮೂಲಗಳು ಚೆನ್ನಾಗಿ ಇವೆ. ಜನರಿಗೆ ಸುಳ್ಳು ಹೇಳುವುದನ್ನು ಬಿಜೆಪಿ ಜನ ಚೆನ್ನಾಗಿ ಕಲಿತಿದ್ದಾರೆ.ಇದನ್ನೇ ಜನರು ಕೂಡ ನಂಬುತ್ತಾರೆ ಎಂದರು.

ತೆಲಂಗಾಣದಲ್ಲಿ ಬಿಆರ್‌ಎಸ್ ನಮಗಿಂತ ಹೆಚ್ಚು ಭರವಸೆ ನೀಡಿತ್ತು. ಗ್ಯಾರಂಟಿ ಕೊಡದೇ ಇದ್ದರೂ ನಾನು ಗೆಲ್ಲುತ್ತಿದ್ದೇವು. ಕಾರಣ ಕೆಸಿಆರ್ ಜನರ ಮಧ್ಯೆ ಇರುತ್ತಿರಲಿಲ್ಲ ಎಂದರು.

ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದ ಅವರು, ಭವಾನಿ ರೇವಣ್ಣ ವೀಡಿಯೋ ವೈರಲ್ ವಿಚಾರಕ್ಕೆ ಉತ್ತರಿಸಿ, ತಾವು ಆ ವೀಡಿಯೋ ನೋಡಿಲ್ಲ ಎಂದು ತಿಳಿಸಿದರು.

Share This Article