ಮುಸ್ಲಿಮರ ವಿರೋಧದ ನಡುವೆಯೂ ಮೊದಲ ಬಾರಿ ಬಾಬಾಬುಡನ್ ಗಿರಿಯಲ್ಲಿ ಹಿಂದೂ ಅರ್ಚಕರಿಂದ ಪೂಜೆ

khushihost
ಮುಸ್ಲಿಮರ ವಿರೋಧದ ನಡುವೆಯೂ ಮೊದಲ ಬಾರಿ ಬಾಬಾಬುಡನ್ ಗಿರಿಯಲ್ಲಿ ಹಿಂದೂ ಅರ್ಚಕರಿಂದ ಪೂಜೆ

ಚಿಕ್ಕಮಗಳೂರು:  ಬಾಬಾಬುಡನ್ ದರ್ಗಾದಲ್ಲಿ ಮೊದಲ ಬಾರಿಗೆ ಗುರು ದತ್ತಾತ್ರೇಯ ಸ್ವಾಮಿಗೆ ಅರ್ಚಕರು ಪೂಜೆ ನೆರವೇರಿಸಿದ್ದಾರೆ.

ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಮುಸ್ಲಿಮರ ತೀವ್ರ ವಿರೋಧದ ನಡುವೆಯೂ ಹಿಂದೂ ಅರ್ಚಕರು ಪೂಜೆ ನೆರವೇರಿಸಿದ್ದಾರೆ. ದತ್ತ ಪಾದುಕೆಗೆ ಹಿಂದೂ ಅರ್ಚಕರಿಂದ ಪೂಜೆ ಸಲ್ಲಿಸಲಾಗಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಎರಡು ದಿನಗಳ ಹಿಂದೆ ಸರ್ಕಾರ ಇಬ್ಬರು ಅರ್ಚಕರನ್ನು ನೇಮಕ ಮಾಡಿತ್ತು.

ಬಾಬಾಬುಡನ್ ಗಿರಿ ದರ್ಗಾದಲ್ಲಿ ಇಲ್ಲಿಯ ವರೆಗೆ ಮುಜಾವರಗಳು ಪೂಜಾ ವಿಧಿ ವಿಧಾನ ನಡೆಸುತ್ತಿದ್ದರು. ಹಿಂದೂಪರ ಸಂಘಟನೆಗಳ ಬಹುದಿನಗಳ ಬೇಡಿಕೆಯಂತೆ ಸರ್ಕಾರ ಮೊದಲ ಬಾರಿಗೆ ಅರ್ಚಕರನ್ನು ನೇಮಕ ಮಾಡಿತ್ತು.

Share This Article