ಕಳಸಾ-ಬಂಡೂರಿ ಕಾಮಗಾರಿ ಸ್ಥಳಕ್ಕೆ ಗೋವಾ ಶಾಸಕನ ರಹಸ್ಯ ಭೇಟಿ 

khushihost
ಕಳಸಾ-ಬಂಡೂರಿ ಕಾಮಗಾರಿ ಸ್ಥಳಕ್ಕೆ ಗೋವಾ ಶಾಸಕನ ರಹಸ್ಯ ಭೇಟಿ 

ಬೆಳಗಾವಿ : ಕಳಸಾ, ಬಂಡೂರಿ ಯೋಜನೆ ಕಾಮಗಾರಿ ನಡೆಯುವ ಸ್ಥಳಕ್ಕೆ ಗೋವಾ ಶಾಸಕ ವಿಜಯ ಸರದೇಸಾಯಿ ಅನುಮತಿ ಇಲ್ಲದೇ ಪ್ರವೇಶಿಸಿದ ಘಟನೆ ನಡೆದಿದೆ.

ಖಾನಾಪುರ ತಾಲೂಕಿನ ಕಣಕುಂಬಿ ಪ್ರದೇಶಕ್ಕೆ ವಿಜಯ ಸರದೇಸಾಯಿ ಭೇಟಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗೋವಾ ಫಾರ್ವರ್ಡ ಪಾರ್ಟಿಯ ಅಧ್ಯಕ್ಷರೂ ಆಗಿರುವ ವಿಜಯ ಸರದೇಸಾಯಿ, ಯೋಜನೆಗೆ ಸಂಬಂಧಿಸಿ ಕರ್ನಾಟಕದ ವಿರುದ್ಧ ಆರೋಪಿಸಿದ್ದಾರೆ. ಕಾಮಗಾರಿಯ ಫೋಟೊಗಳನ್ನು ಗೋವಾದಲ್ಲಿ ಬಿಡುಗಡೆ ಮಾಡಿದ್ದಾರೆ. ಗೋವಾದ ಪರಿಸರವಾದಿಗಳನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಗೋವಾ ಆಕ್ಷೇಪಿಸುತ್ತಿದೆ. ಬಂಡೂರಿ ನೀರು ಬಳಸಲು ಆಣೆಕಟ್ಟೆ ಹಾಗೂ ಅರಣ್ಯ ಪ್ರದೇಶದಲ್ಲಿ ಟನಲ್ ನಿರ್ಮಾಣದ ಅಗತ್ಯ ಇದೆ. ಈ ಕಾಮಗಾರಿಗೆ ಗೋವಾ ಅಡ್ಡಿಪಡಿಸುತ್ತಿದೆ.

Share This Article