ಶಿರೂರ ಡ್ಯಾಮ್ ದಲ್ಲಿ ಗೋಕಾಕ ಯುವಕ ಜಲಸಮಾಧಿ

khushihost
ಶಿರೂರ ಡ್ಯಾಮ್ ದಲ್ಲಿ ಗೋಕಾಕ ಯುವಕ ಜಲಸಮಾಧಿ

ಬೆಳಗಾವಿ : ಗೋಕಾಕ ತಾಲೂಕಿನ ಮಲಾಮರಡಿ ಗ್ರಾಮದ 20 ವರ್ಷದ ದರ್ಶನ ಸುಂದರ ಸಾಮಾನಗಡ ಎಂಬ ಯುವಕ ಯಮಕನಮರಡಿ ಬಳಿಯ ಶಿರೂರ ಜಲಾಶಯದಲ್ಲಿ ಶನಿವಾರ ನೀರು ಪಾಲಾಗಿದ್ದಾರೆ.

ಬೆಳಗಾವಿಯ ತನ್ನ ಸ್ನೇಹಿತರೊಂದಿಗೆ ಯುವಕ ದರ್ಶನ್ ಈಜಲು ಹೋಗಿದ್ದ. ನೀರಿಗೆ ಇಳಿದಿದ್ದ ಆತ ವಾಪಸ್ ಮರಳದೇ ನೀರು ಪಾಲಾಗಿದ್ದಾನೆ‌. ಈ ಬಗ್ಗೆ ಕುಟುಂಬಸ್ಥರು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿಯೇ ದೂರು ನೀಡಿದ್ದಾರೆ. ಆದರೆ ರವಿವಾರ ಬೆಳಗ್ಗೆ 11 ಗಂಟೆಯಾದರೂ ಒಬ್ಬರೂ ಪೊಲೀಸರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಲು ಮುಂದಾಗುತ್ತಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

Share This Article