ಸಹ ಪ್ರಯಾಣಿಕನೊಂದಿಗೆ ಜಗಳ; ಚಲಿಸುತ್ತಿರುವ ರೈಲಿನಿಂದಲೇ ಎಸೆದ ಆಘಾತಕಾರಿ ದೃಶ್ಯ ವಿಡಿಯೋ ಇಲ್ಲಿದೆ

khushihost
ಸಹ ಪ್ರಯಾಣಿಕನೊಂದಿಗೆ ಜಗಳ; ಚಲಿಸುತ್ತಿರುವ ರೈಲಿನಿಂದಲೇ ಎಸೆದ ಆಘಾತಕಾರಿ ದೃಶ್ಯ ವಿಡಿಯೋ ಇಲ್ಲಿದೆ

ಕೋಲಕತ್ತಾ, ೧೭- ಚಲಿಸುತ್ತಿದ್ದ ರೈಲಿನಲ್ಲಿ ಸಹ ಪ್ರಯಾಣಿಕನೊಂದಿಗೆ ಮಾತಿನ ಚಕಮಕಿ ನಡೆಸಿದವನೊಬ್ಬ ಆತನ ಮೇಲೆ ಹಲ್ಲೆ ನಡೆಸಿ, ಬಳಿಕ ರೈಲಿನ ಬೋಗಿಯಿಂದಲೇ ಆತನನ್ನು ಹೊರಗೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಹೌರಾ – ಮಾಲ್ಡಾ ಟೌನ್ ಇಂಟರ್ ಸಿಟಿ ಎಕ್ಸಪ್ರೆಸ್ ನಲ್ಲಿ ತಾರಪಿತ ರೋಡ್ ಹಾಗೂ ರಾಮಪುರತ್ ರೈಲು ನಿಲ್ದಾಣಗಳ ನಡುವೆ ಶನಿವಾರ ಈ ಘಟನೆ ನಡೆದಿದ್ದು, ಮೊದಲಿಗೆ ಈ ಇಬ್ಬರು ವಾಗ್ವಾದ ನಡೆಸಿದ್ದಾರೆ. ಬಳಿಕ ಓರ್ವ ಬಂದು ಸೀಟಿನಲ್ಲಿ ಕುಳಿತಿದ್ದರೆ ಮತ್ತೊಬ್ಬ ಬಾಗಿಲಿನಲ್ಲಿ ನಿಂತಿರುತ್ತಾನೆ. ಬಾಗಿಲಿನಲ್ಲಿ ನಿಂತು ಮತ್ತೆ ಬಂದು ವಾಗ್ವಾದ ಮುಂದುವರಿಸಿದ್ದು ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಕೋಪೋದ್ರಿಕ್ತನಾದ ಪ್ರಯಾಣಿಕ ಬಾಗಿಲಿನಲ್ಲಿ ನಿಂತವನನ್ನು ಅನಾಮತ್ತಾಗಿ ಚಲಿಸುತ್ತಿರುವ ರೈಲಿನಿಂದ ತಳ್ಳಿದ್ದಾನೆ. ನಂತರ ಏನೂ ಆಗದವನಂತೆ ತನ್ನ ಸೀಟಿನಲ್ಲಿ ಕುಳಿತಿದ್ದಾನೆ.

ಇದೇ ಬೋಗಿಯಲ್ಲಿದ್ದ ಒಬ್ಬರು ತಮ್ಮ ಮೊಬೈಲ್ ನಲ್ಲಿ ಈ ಎಲ್ಲ ದೃಶ್ಯವನ್ನು ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ರೈಲಿನ ಹಳಿ ಮೇಲೆ ಬಿದ್ದವನು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ರೈಲ್ವೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

Share This Article