ಹಿಂದೂ ಕಾರ್ಯಕರ್ತರ ಗಲಾಟೆ ಪ್ರಕರಣ : ಸಿಪಿಐ ಅಮಾನತ್ತು 

khushihost
ಹಿಂದೂ ಕಾರ್ಯಕರ್ತರ ಗಲಾಟೆ ಪ್ರಕರಣ : ಸಿಪಿಐ ಅಮಾನತ್ತು 

ಬಾಗಲಕೋಟ : ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಹಿಂದೂ ಕಾರ್ಯಕರ್ತರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟ ಸಿಪಿಐ ಕರೆಪ್ಪ ಬನ್ನೆ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.

ಸೆಪ್ಟೆಂಬರ್ 6 ರಂದು ಗಣಪತಿ ಮೆರವಣಿಗೆ ವೇಳೆ ಸಿಪಿಐ, ಬೇಗ ಗಣೇಶ ಮೆರವಣಿ ಸಾಗಿಸಿ ಎಂದು ಹೇಳಿದ್ದಕ್ಕೆ ಸಿಪಿಐ ಸೇರಿದಂತೆ ಇಬ್ಬರು ಕಾನ್ಸ್‌ಟೇಬಲ್ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ನಂತರ ಸಿಪಿಐ ಕರೆಪ್ಪ ಬನ್ನೆ ಈ ಆರು ಮಂದಿಗೆ ಜೈಲಿನಲ್ಲಿ ಟಾರ್ಚರ್ ನೀಡಿದ್ದರು ಎಂದು ಹಿಂದೂ ಜಾಗರಣಾ ವೇದಿಕೆಯು ಕೆರೂರು ಚಲೋ ಪ್ರತಿಭಟನೆ ನಡೆಸಿತ್ತು. ಸುಳ್ಳು ಪ್ರಕರಣ ದಾಖಲಿಸಿದ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟ ಎಸ್ ಪಿ ಜಯಪ್ರಕಾಶ ಅವರು ಸಿಪಿಐ ಕರೆಪ್ಪ ಬನ್ನೆ ಅವರನ್ನು ಅಮಾನತು ಆದೇಶ ಮಾಡಿದ್ದಾರೆ.

Share This Article