ಮಹಾತ್ಮ ಗಾಂಧಿಯನ್ನು ಮಹಿಷಾಸುರನಾಗಿ ಪ್ರದರ್ಶಿಸಿದ್ದ ಹಿಂದೂ ಮಹಾಸಭಾ

khushihost
ಮಹಾತ್ಮ ಗಾಂಧಿಯನ್ನು ಮಹಿಷಾಸುರನಾಗಿ ಪ್ರದರ್ಶಿಸಿದ್ದ ಹಿಂದೂ ಮಹಾಸಭಾ

ಕೋಲ್ಕತ್ತಾ: ಕೋಲ್ಕತ್ತಾದ ಪೂರ್ವ ಅಂಚಿನಲ್ಲಿರುವ ಕಸ್ಬಾದಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಮಹಿಷಾಸುರನಾಗಿ ಪ್ರದರ್ಶಿಸಿದ್ದು, ಇದೀಗ ಭಾರೀ ವಿವಾದವನ್ನು ಹುಟ್ಟುಹಾಕಿದೆ.

ಅಖಿಲ ಭಾರತೀಯ ಹಿಂದೂ ಮಹಾಸಭಾದ ಪೂಜೆಯಲ್ಲಿ ಮಹಿಷಾಸುರನ ಮುಖವು ಮಹಾತ್ಮ ಗಾಂಧಿಯವರ ಮುಖವನ್ನು ಹೋಲುವಂತೆ ಮಾಡಲಾಗಿದೆ.

ಈ ಸುದ್ದಿ ಬಹಿರಂಗವಾಗುತ್ತಿದ್ದಂತೇ ಅಲ್ಲಿನ ಆಡಳಿತವು ತರಾತುರಿಯಲ್ಲಿ ಪೂಜಾ ಸಂಘಟಕರನ್ನು ತಲುಪಿದ್ದು ವಿಗ್ರಹವನ್ನು ಬದಲಾಯಿಸುವಂತೆ ಒತ್ತಾಯಿಸಿದೆ.

ಪೊಲೀಸರು ಮತ್ತು ಆಡಳಿತದ ಒತ್ತಡಕ್ಕೆ ಮಣಿದು ಪೂಜೆ ಸಂಘಟಕರು ಗಾಂಧಿ ವೇಷಭೂಷಣದಲ್ಲಿ ತಯಾರಿಸಿದ ವಿಗ್ರಹವನ್ನು ಬದಲಾಯಿಸಿದ್ದು, ಅದೇ ಜಾಗಕ್ಕೆ ಮಹಿಷಾಸುರನ ರೂಪದ ವಿಗ್ರಹವನ್ನು ಸ್ಥಾಪಿಸಿದ್ದಾರೆ.

ಗಾಂಧಿ ಜಯಂತಿಯಂದು ಅಖಿಲ ಭಾರತ ಹಿಂದೂ ಮಹಾಸಭಾ ಆಯೋಜಿಸಿದ್ದ ದುರ್ಗಾಪೂಜೆಯಲ್ಲಿ ಗಾಂಧಿಯನ್ನು ಮಹಿಷಾಸುರನಂತೆ ತೋರಿಸಲಾಗಿದೆ ಎಂಬ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಪೊಲೀಸರು ಮತ್ತು ಆಡಳಿತವು ಕಾರ್ಯಪ್ರವೃತ್ತವಾಯಿತು.

Share This Article