ಗೋವಾ ಕಡೆ ಹೋಗುವವರಿಗೆ ಪೊಲೀಸರ ಮಹತ್ವದ ಸೂಚನೆ

khushihost
ಗೋವಾ ಕಡೆ ಹೋಗುವವರಿಗೆ ಪೊಲೀಸರ ಮಹತ್ವದ ಸೂಚನೆ

ಬೆಳಗಾವಿ : ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ನದಿಗಳು ತುಂಬಿ ಹರಿಯುತ್ತಿದ್ದು ಹಲವೆಡೆ ಸೇತುವೆಗಳು ಶಿಥಿಲಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಂಚಾರ ಮಾರ್ಗ ಬದಲಿಸಲಾಗಿದೆ.

ಜಾಂಬೋಟಿ ಹಾಗೂ ಚೋರ್ಲಾ ಪ್ರದೇಶ ವ್ಯಾಪ್ತಿಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಸೇತುವೆಗಳು ಶಿಥಿಲಗೊಂಡಿದ್ದು ಸುರಕ್ಷತೆ ದೃಷ್ಟಿಯಿಂದ ಸಂಚಾರ ಮಾರ್ಗ ಬದಲಿಸಲಾಗಿದೆ.

ಬೆಳಗಾವಿ ನಗರದಿಂದ ಜಾಂಬೋಟಿ-ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಂಚರಿಸುವ ಎಲ್ಲಾ ಭಾರಿ ವಾಹನಗಳು ಪೀರನವಾಡಿ ಕ್ರಾಸ್ ಹತ್ತಿರ ಎಡ ತಿರುವು ಪಡೆದುಕೊಂಡು ಖಾನಾಪುರ ಮಾರ್ಗವಾಗಿ ಸಂಚರಿಸುವಂತೆ ಕೋರಲಾಗಿದೆ.

Share This Article