ಜಾಗತಿಕ ಹಸಿವು ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ….!

khushihost
ಜಾಗತಿಕ ಹಸಿವು ಸೂಚ್ಯಂಕದಲ್ಲಿ 107ನೇ ಸ್ಥಾನಕ್ಕೆ ಕುಸಿದ ಭಾರತ….!

ಹೊಸದಿಲ್ಲಿ, ೧೫- ಭಾರತದಲ್ಲಿ ಹಸಿವಿನಿಂದ ಅಪೌಷ್ಟಿಕತೆ  ಹೆಚ್ಚಾಗುತ್ತಿದ್ದು ಇತ್ತೀಚೆಗೆ ಜಾಗತಿಕ ಹಸಿವು ಸೂಚ್ಯಂಕ ನೀಡಿದ ವರದಿ ಪ್ರಕಾರ, ಭಾರತ 107 ನೇ ಸ್ಥಾನಕ್ಕೆ ಕುಸಿದಿದೆ. ಇಂಥಹದೊಂದು ಆತಂಕ ಪಡುವ ವಿಚಾರ ಇದೀಗ ಬಹಿರಂಗವಾಗಿದೆ.

ಜಾಗತಿಕ ಹಸಿವು ಸೂಚ್ಯಂಕದ 2022ರ ಪಟ್ಟಿಯಲ್ಲಿ ಭಾರತ 107ನೇ ಸ್ಥಾನ ಪಡೆದಿದೆ. ಕಳೆದ ವರ್ಷ 101ನೇ ಸ್ಥಾನದಲ್ಲಿ ಭಾರತ ಇತ್ತು. ಇನ್ನು ಐರಿಶ್ ಸಂಸ್ಥೆ ಕನ್ಸರ್ನ ವರ್ಲ್ಡವೈಡ್ ಮತ್ತು ಜರ್ಮನ್ ಸಂಸ್ಥೆ ವೆಲ್ಟ್ ಹಂಗರ್ ಹಿಲ್ಫ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಭಾರತದಲ್ಲಿ ಹಸಿವು ಹೇಗಿದೆ, ಅದು ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಭಾರತದ ನೆರೆಯ ದೇಶಗಳಾದ ನೇಪಾಳಕ್ಕೆ 81, ಪಾಕಿಸ್ತಾನಕ್ಕೆ 99, ಶ್ರೀಲಂಕಾಕ್ಕೆ 64 ಮತ್ತು ಬಾಂಗ್ಲಾ ದೇಶಕ್ಕೆ 84 ನೇ ಸ್ಥಾನ ನೀಡಲಾಗಿದೆ. ಇನ್ನು ಅಪೌಷ್ಟಿಕತೆ, ಇದು ಮಗುವಿನ ಕ್ಷೀಣತೆ ಜೊತೆಗೆ ಮಕ್ಕಳ ಬೆಳವಣಿಗೆ ಕುಂಠಿತ ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದ ಮೇಲೆ ಸ್ಥಾನಗಳನ್ನು ನಿರ್ಧರಿಸಲಾಗಿದೆ.

Share This Article