ಗೋಧಿ ಕದಿಯಲು ಬಂದ ಯುವಕನೊಂದಿಗೆ ಅಮಾನವೀಯ ವರ್ತನೆ; ಟ್ರಕ್ ಗೆ ಕಟ್ಟಿ ಮೆರವಣಿಗೆ

khushihost
ಗೋಧಿ ಕದಿಯಲು ಬಂದ ಯುವಕನೊಂದಿಗೆ ಅಮಾನವೀಯ ವರ್ತನೆ; ಟ್ರಕ್ ಗೆ ಕಟ್ಟಿ ಮೆರವಣಿಗೆ

ಚಂಡಿಗಡ, ೧೨- ಪಂಜಾಬಿನ ಮುಕ್ತಾಸರ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಟ್ರಕ್ ನಲ್ಲಿ ಗೋಧಿ ಸಾಗಿಸುತ್ತಿದ್ದ ವೇಳೆ ಕದಿಯಲು ಬಂದ ಯುವಕನೊಬ್ಬ ಚಾಲಕ ಮತ್ತು ಆತನ ಸಹಾಯಕನಿಗೆ ಸಿಕ್ಕಿಬಿದ್ದಿದ್ದು, ಬಳಿಕ ಆತನನ್ನು ಟ್ರಕ್ ಮುಂಬದಿ ಕಟ್ಟಿ ಮೆರವಣಿಗೆ ಮಾಡಲಾಗಿದೆ.

ಯುವಕನನ್ನು ಮುಂದಿನ ಬಾನೆಟ್ ಗೆ ಕಟ್ಟಿರುವ ಟ್ರಕ್ ಚಾಲಕನ ಸಹಾಯಕ ಕಳ್ಳ ಕಳ್ಳ ಎಂದು ಹೇಳುತ್ತಾ ಹೋಗಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕ ಮತ್ತು ಆತನ ಸಹಾಯಕನ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಯುವಕ ತಪ್ಪು ಮಾಡಿರುವುದು ಕಂಡುಬಂದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಅದನ್ನು ಬಿಟ್ಟು ಅಪಾಯಕರ ರೀತಿಯಲ್ಲಿ ಟ್ರಕ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಅಲ್ಲದೆ ಪೊಲೀಸರು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Share This Article