ಇಂಟರ್ನೆಟ್ ಬಳಕೆದಾರರು ತಪ್ಪದೇ ಓದಿ ಈ ಸುದ್ದಿ

khushihost
ಇಂಟರ್ನೆಟ್ ಬಳಕೆದಾರರು ತಪ್ಪದೇ ಓದಿ ಈ ಸುದ್ದಿ

ಹೊಸದಿಲ್ಲಿ, ೧೪- ನೀವು ಇಂಟರ್ ನೆಟ್ ಬಳಸುತ್ತಿದ್ದೀರಿ ಎಂದರೆ ಈ ಸುದ್ದಿ ಓದಲೇಬೇಕು. ಇಂಟರ್ ನೆಟ್ ಬಳಸುವ ನೀವು ಜಗತ್ತಿನ ಎದುರು ಬಟಾಬಯಲಾದಂತೆ.

ಹೌದು, ಇಂಟರ್ ನೆಟ್ ಬಳಕೆದಾರರ ಪ್ರತಿಯೊಂದು ಆಗುಹೋಗುಗಳ ಮೇಲೆ ಮೂರನೇ ಕಣ್ಣು ನಿಗಾ ವಹಿಸಿರುತ್ತದೆ. ನೀವು ಅಂತರ್ಜಾಲದಲ್ಲಿ ಹುಡುಕಾಡುವ ಮಾಹಿತಿ, ನಿಮ್ಮಲ್ಲಿ ನಡೆಯುವ ಸಂವಹನ ಚರ್ಚೆಗಳ ಮೇಲೆ ನಿಗಾ ವಹಿಸಲಾಗಿರುತ್ತದೆ.

ಅಲ್ಲದೇ, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಚರ್ಚೆ ನಡೆದರೆ, ಅದನ್ನೂ ಕೂಡ ಮಾರಾಟದ ಸರಕನ್ನಾಗಿ ಮಾಡಿಕೊಳ್ಳಲಾಗುತ್ತದೆ. ನೀವೇನಾದರೂ ಯಾರಿಗೂ ಗೊತ್ತಾಗಲ್ಲ ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆ ಎನ್ನಲಾಗಿದೆ.

ನಿಮಗೆ ಅಗತ್ಯವಿರುವ ಯಾವುದಾದರೂ ಪ್ರಾಡೆಕ್ಟ್ ಬಗ್ಗೆ ಸರ್ಚ್ ಮಾಡಿರುತ್ತಿರಾ ಎಂದಿಟ್ಟುಕೊಳ್ಳಿ, ನೀವು ಅದನ್ನು ಬಿಟ್ಟು ಬೇರೆ ಪುಟಕ್ಕೆ ಹೋದರೂ, ಅದಕ್ಕೆ ಸಂಬಂಧಿಸಿದ ಮಾಹಿತಿಗಳು ನಿಮ್ಮ ಪುಟದಲ್ಲಿ ಕಾಣಿಸಿಕೊಳ್ಳುತ್ತವೆ. ನಾವು ಸೇಫ್, ಯಾರಿಗೆ ಏನೂ ಗೊತ್ತಾಗಲ್ಲ ಎಂದುಕೊಂಡಿದ್ದರೆ, ಅದು ನಿಮ್ಮ ಭ್ರಮೆ. ಇಂಟರ್ ನೆಟ್ ಬಳಸುತ್ತಿರುವಿರಾದರೆ ಜಗತ್ತಿನ ಎದುರು ನೀವು ಬಟಾಬಯಲಾದಂತೆ ಎಂಬುದಂತೂ ಸತ್ಯ.

Share This Article