ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆಗಾಗ ಗಡಿ ವಿವಾದ ಎಬ್ಬಿಸುತ್ತಾರೆ : ಜಗದೀಶ ಶೆಟ್ಟರ್

khushihost
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಆಗಾಗ ಗಡಿ ವಿವಾದ ಎಬ್ಬಿಸುತ್ತಾರೆ : ಜಗದೀಶ ಶೆಟ್ಟರ್

ಧಾರವಾಡ: ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಬಹಳ‌ ವರ್ಷಗಳಿಂದ ನಡೆದು ಬಂದಿದೆ. ಈ ಬಗ್ಗೆ ಬೇರೆ ಬೇರೆ ಕಮಿಷನ್ ಹಾಗೂ ವರದಿಗಳಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಮಹಾಜನ್ ಎಂಬ ವರದಿ ಕೂಡಾ ಕೊಟ್ಟಾಗಿದೆ.‌ ಎರಡು ರಾಜ್ಯಗಳು ಆ ಸಂದರ್ಭದಲ್ಲಿ ಮಹಾಜನ್ ವರದಿ ಒಪ್ಪಿಕೊಂಡಿವೆ. ವರದಿಯಂತೆ ಬೆಳಗಾವಿ ಕರ್ನಾಟಕದಲ್ಲೇ ಉಳಿಯಲಿದೆ, ಮಹಾಜನ್ ವರದಿ ಅಂತಿಮ ಆಗಿದೆ.

ಮಹಾರಾಷ್ಟ್ರದಲ್ಲಿ ಬೇರೆ ವಿಚಾರ ಬಂದಾಗ ಮಹಾರಾಷ್ಟ್ರ ರಾಜರಣಿಗಳು ಹಾಗೂ ನಮ್ಮಲ್ಲಿ ಎಂಇಎಸ್ ನವರು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದರು.

ತಾವು ಬೆಳೆಯಲು ಈ ರೀತಿ ಕುತಂತ್ರ ಮಾಡುವ ಮೂಲಕ ಮಹಾರಾಷ್ಟ್ರ ರಾಜ್ಯದ ಮುಖಾಂತರ ಗಡಿ ಬಗ್ಗೆ ಮಾತನಾಡಿ, ಮರಾಠಿ ಹಾಗೂ ಕನ್ನಡಿಗರ ಮಧ್ಯದಲ್ಲಿ ಬೆಂಕಿ ಹಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಈಗ ಮರಾಠಿಗರು ಹಾಗೂ ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ, ಸೌಹಾರ್ದ ವಾತಾವರಣ ಇದೆ. ಪದೇ ಪದೇ ಕೆದಕುವ ಕೆಲಸ ಮಾಡಬೇಕಿಲ್ಲ ಎಂದರು.

Share This Article