ಗೋಕಾಕ ಬಳಿಯ ಕಮಲದಿನ್ನಿ ಸೇತುವೆ ಮುಳುಗಡೆ

khushihost
ಗೋಕಾಕ ಬಳಿಯ ಕಮಲದಿನ್ನಿ ಸೇತುವೆ ಮುಳುಗಡೆ

ಗೋಕಾಕ : ಪಶ್ಚಿಮ ಘಟ್ಟ, ಮಹಾರಾಷ್ಟ್ರದ ಭಾಗದಲ್ಲಿ ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ  ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಜಿಲ್ಲೆಯ ಹಲವು ಸೇತುವೆಗಳು ಮುಳುಗಡೆಯಾಗಿವೆ. ಘಟಪ್ರಭಾ ನದಿ ಅಬ್ಬರಕ್ಕೆ ಕಮಲದಿನ್ನಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆಯ ಮೇಲೆ ಒಂದೂವರೆ ಅಡಿಗಳಷ್ಟು ರಭಸವಾಗಿ ನೀರು ಹರಿಯುತ್ತಿದೆ.

ಜಲಾವೃತಗೊಂಡಿರುವ ಸೇತುವೆಯ ಮೇಲೆಯೇ ಜನರು ಜೀವದ ಹಂಗು ತೊರೆದು ಓಡಾಡಬೇಕಾದ ಸ್ಥಿತಿ ಎದುರಾಗಿದೆ. ಮೂಡಲಗಿ, ಗೋಕಾಕ ಭಾಗದಲ್ಲಿ ಘಟಪ್ರಭಾ ನದಿ ಅಬ್ಬರಿಸಿ ಹರಿಯುತ್ತಿದ್ದು, ಕೃಷಿ ಭೂಮಿ, ಗ್ರಾಮಗಳು ಜಲಾವೃತಗೊಂಡಿವೆ.

Share This Article