spot_img
24.1 C
Belagavi
Thursday, August 11, 2022

ಹಿಂದೂ ಮುಖಂಡನ ಹತ್ಯೆ : ಪರಿಸ್ಥಿತಿ ವಿಕೋಪಕ್ಕೆ ; ಸಿಎಂ ಬೊಮ್ಮಾಯಿ ತುರ್ತು ಸಭೆ

ದಕ್ಷಿಣ ಕನ್ನಡ : ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ...

ಉತ್ತರಪ್ರದೇಶದಲ್ಲಿ ಸಿಡಿಲಿಗೆ ಎರಡೇ ದಿನದಲ್ಲಿ 18 ಮಂದಿ ಬಲಿ

ಲಖನೌ : ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಕಳೆದ...
spot_img

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸತ್ಕಾರ ಸಮಾರಂಭ

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮತ್ತು ತಾಲೂಕಿನ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಮತ್ತು ಸತ್ಕಾರ ಸಮಾರಂಭವು ದಿನಾಂಕ 30/07/ 2022 ಶನಿವಾರದಂದು ಬೆಳಗಾವಿಯ ಸಂಕಮ್ ಹೋಟೆಲ್ ನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಬೆಳಗಾವಿ(ದ) ಉಪನಿರ್ದೇಶಕರಾದ ಶ್ರೀ ಬಸವರಾಜ ನಾಲತವಾಡ ಇವರು ಭಾಗವಹಿಸಿ ಸಂಘ ಮತ್ತು ಕಾರ್ಯಾಲಯದ ನಡುವಿನ ಉತ್ತಮ ಸಂಬಂಧ ವೃದ್ದಿಸಿಕೊಂಡು ಹೋಗಲು ಕರೆ ನೀಡಿದರು ಹಾಗೂ ರಾಮಪ್ಪ ಗುಗವಾಡ ಅವರ ಸಂಘಟನಾ ಚತುರತೆಯನ್ನು ಕೊಂಡಾಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಶ್ರೀ ಬಿ ವೈ ಹನ್ನೂರ ಇವರು ಭಾಗಿಯಾಗಿ ಸಹ ಶಿಕ್ಷಕರ ಸಂಘದ ಸಂಘಟನಾ ಶಕ್ತಿ ಹಾಗೂ ಬೆಳೆದು ಬಂದ ರೀತಿಯನ್ನು ವರ್ಣಿಸಿದರು.

ಸತ್ಕಾರ ಸ್ವೀಕರಿಸಿದವರ ಪರ ಮಾತನಾಡಿದ ಹಾಗೂ ಮೊನ್ನೆ ನಡೆದ ರಾಜ್ಯ ಚುನಾವಣೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಯಭೇರಿ ಸಾಧಿಸಿ ಶಿಕ್ಷಕರ ದ್ವನಿಯಾದ ಶ್ರೀ ರಾಮಪ್ಪ.ಗುಗವಾಡ ಇವರು ಸಂಘಟನೆ ಬೆಳೆಸಿದ ರೀತಿಯನ್ನು ಸಂಘದೊಂದಿಗೆ ತಾವು ಬೆಳೆದು ಬಂದ ದಾರಿಯನ್ನು ಶಿಕ್ಷಕ ಸಮುದಾಯಕ್ಕೆ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್ಎಂ ಪಾಟೀಲ್ ವಹಿಸಿದ್ದರು ಮುಖ್ಯ ಅತಿಥಿಗಳಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಪಿ.ಜುಟ್ಟನ್ನವರ್, ಬೆಳಗಾವಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ ರಾಯವ್ವಗೊಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಜಯಕುಮಾರ್ ಹೆಬ್ಬಳ್ಳಿ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಎಸ್ ಮಠದ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಎಂ ಡಿ ನಂದೇನ್ನವರ, ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಆರ್ ಪಿ ಮಠ, ಎಸ್.ಸಿ /ಎಸ್ಟಿ ಪ್ರಾಥಮಿಕ ಶಾಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ಶೇಖಮ್ಮನವರ್ ಮೇಡಂ ಇವರು ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎ.ಎಸ್.

ಖೋತ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಶಿವಾನಂದ್ ಮಳಗಲಿ ಸ್ವಾಗತಿಸಿದರು. ನಿರೂಪಣೆಯನ್ನು ಮಹೇಶ್ ಚೆನ್ನoಗಿ ಇವರು ನಿರ್ವಹಿಸಿದರು. ಕೊನೆಗೆ ವಂದನಾರ್ಪಣೆಯನ್ನು ಶ್ರೀ ಎಂ ಎನ್ ಕರಡಿಗುಡ ಇವರು ಮಾಡಿದರು.

Related News

spot_img

Crime News

spot_img

State News

spot_img