ಮುಖ ಮುಚ್ಚಿಕೊಂಡು ಹಿಂಡಲಗಾ ಜೈಲು ಸೇರಿದ ಕಿತ್ತೂರು ತಹಸೀಲ್ದಾರ

khushihost
ಮುಖ ಮುಚ್ಚಿಕೊಂಡು ಹಿಂಡಲಗಾ ಜೈಲು ಸೇರಿದ ಕಿತ್ತೂರು ತಹಸೀಲ್ದಾರ

ಬೆಳಗಾವಿ :ಲಂಚ ತೆಗೆದುಕೊಳ್ಳುತ್ತಿದ್ದಾಗ ಲೋಕಾಯುಕ್ತ ಪೊಲೀಸ್‌ ಬಲೆಗೆ ಬಿದ್ದಿರುವ ಚನ್ನಮ್ಮನ ಕಿತ್ತೂರಿನ ತಹಶೀಲ್ದಾರ್ ಸೋಮಲಿಂಗ ಹಾಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಅವರನ್ನು ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.

ಪೊಲೀಸ್ ವಾಹನದಲ್ಲಿ ಜೈಲಿಗೆ ಬಂದ ಇಬ್ಬರೂ ಆರೋಪಿಗಳು ಮಾಧ್ಯಮದವರನ್ನು ಕಂಡ ತಕ್ಷಣ ತಮ್ಮ ಬ್ಯಾಗುಗಳಿಂದ ಮುಖ ಮುಚ್ಚಿಕೊಂಡು ಒಳಗೆ ಹೋಗಿದ್ದಾರೆ.

ಖೋದಾನಪುರ ರೈತ ರಾಜೇಂದ್ರ ಇನಾಮದಾರ ಅವರ ಜಮೀನು ಖಾತೆ ಮಾಡಲು ಆರೋಪಿಗಳು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಶುಕ್ರವಾರ ರಾತ್ರಿ 2 ಲಕ್ಷ ಲಂಚ ತೆಗೆದುಕೊಳ್ಳುವ ವೇಳೆ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ಪೊಲೀಸರು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ಸೋಮವಾರದವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article