ಕಾಫಿ ದೈತ್ಯ ಸ್ಟಾರ್‌ಬಕ್ಸ್’ನ ನೂತನ ಸಿಇಓ ಆಗಿ ಲಕ್ಷ್ಮಣ್ ನರಸಿಂಹನ್ ಆಯ್ಕೆ 

khushihost
ಕಾಫಿ ದೈತ್ಯ ಸ್ಟಾರ್‌ಬಕ್ಸ್’ನ ನೂತನ ಸಿಇಓ ಆಗಿ ಲಕ್ಷ್ಮಣ್ ನರಸಿಂಹನ್ ಆಯ್ಕೆ 

ವಾಷಿಂಗ್ಟನ್: ಸ್ಟಾರ್‌ಬಕ್ಸ್ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಲಕ್ಷ್ಮಣ ನರಸಿಂಹನ್ ಅವರನ್ನು ಹೆಸರಿಸಿದೆ.

ಲಕ್ಷ್ಮಣ ಅವರು ಅಕ್ಟೋಬರ್ 1 ರಂದು ಕಂಪನಿಗೆ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 2023ರಲ್ಲಿ ಪ್ರಸ್ತುತ ಸಿಇಓ ಹೊವಾರ್ಡ ಷುಲ್ಟಜ್ ನಿರ್ಗಮನದ ನಂತ್ರ ಲಕ್ಷ್ಮಣ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಸ್ವತಂತ್ರ ಸ್ಟಾರ್‌ಬಕ್ಸ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೆಲೋಡಿ ಹಾಬ್ಸನ್ ಅವರು ಲಕ್ಷ್ಮಣ ನರಸಿಂಹನ್ ಅವರನ್ನು ಸ್ಫೂರ್ತಿದಾಯಕ ನಾಯಕ ಎಂದು ಕರೆದಿದ್ದಾರೆ. ಸ್ಟಾರ್‌ಬಕ್ಸ್‌ನ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ನಮ್ಮ ಮುಂದಿರುವ ಅವಕಾಶಗಳನ್ನು ಈಡೇರಿಸಿಕೊಳ್ಳಲು ಸೂಕ್ತವಾದ ಆಯ್ಕೆಯಾಗಿದೆ’ ಎಂದು ಅವರು ಹೇಳಿದರು.

Share This Article