ಆದಾಯಕ್ಕಿಂತ ಹೆಚ್ಚು ಆಸ್ತಿ: ವಿಜಯೇಂದ್ರ ಪತ್ನಿ ಸಹೋದರ ಮೇಲೆ ಲೋಕಾಯುಕ್ತ ದಾಳಿ

khushihost
ಆದಾಯಕ್ಕಿಂತ ಹೆಚ್ಚು ಆಸ್ತಿ: ವಿಜಯೇಂದ್ರ ಪತ್ನಿ ಸಹೋದರ ಮೇಲೆ ಲೋಕಾಯುಕ್ತ ದಾಳಿ

ಯಾದಗಿರಿ, ೫: ಬಿಜೆಪಿ ರಾಜ್ಯಾಧ್ಯಕ್ಷ  ವಿಜಯೇಂದ್ರ ಅವರ ಪತ್ನಿಯ ಸಹೋದರ ಡಾ ಪ್ರಭುಲಿಂಗ ಮಾನ್ಕರ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಡಾ ಮಾನ್ಕರ ಅವರು ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಅಧಿಕಾರಿಯಾಗಿದ್ದು ಅವರ ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿರುವ ಮನೆ, ಹೊರವಲಯದ ಫಾರ್ಮ ಹೌಸ್ ಮತ್ತು ಯಾದಗಿರಿ ಆರೋಗ್ಯ ಮತ್ತು ಕಲ್ಯಾಣ ಕಚೇರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಲ್ಲ ಮೂಲಗಳ ಆದಾಯಕ್ಕಿಂತ ಭಾರಿ ಆಸ್ತಿಯನ್ನು ಡಾ ಪ್ರಭುಲಿಂಗ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುವರೆಂದು ಮಾಹಿತಿ ಲಭ್ಯವಾಗಿದೆ. ಲೋಕಾಯುಕ್ತ ಎಸ್ ಪಿ ಕರ್ನೂಲ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದ್ದು ವಿವರಗಳು ಇನ್ನೂ ಲಭ್ಯವಾಗಬೇಕಿದೆ.

ಈ ಹಿಂದೆ ಕಲಬುರಗಿಯ ಆರ್‌ಸಿಎಚ್ ಆಗಿದ್ದು, ಈಗ ಯಾದಗಿರಿಯ ಡಿಎಚ್‌ಒ ಆಗಿರುವ ಡಾ.ಪ್ರಭುಲಿಂಗ ಅವರ ಮನೆ‌ಯ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಈ ದಾಳಿ ನಡೆಸಿದ್ದಾರೆ.

Share This Article