ಚೋರ್ಲಾ ಘಾಟನಲ್ಲಿ ಭೂಕುಸಿತದಿಂದ ಲಾರಿ ಅಪಘಾತ

khushihost
ಚೋರ್ಲಾ ಘಾಟನಲ್ಲಿ ಭೂಕುಸಿತದಿಂದ ಲಾರಿ ಅಪಘಾತ

ಬೆಳಗಾವಿ, ೧೫: ಕಳೆದ ಒಂದೆರಡು ದಿನಗಳಿಂದ ಮತ್ತೆ ಸತತ ಮಳೆಯಾಗುತ್ತಿರುವ ಕಾರಣ ಬೆಳಗಾವಿ-ಗೋವಾ ಸಂಪರ್ಕಿಸುವ ಚೋರ್ಲಾ ಘಾಟನಲ್ಲಿ ಗುಡ್ಡ ಕುಸಿತದಿಂದ ಲಾರಿಯೊಂದು ಅಪಘಾತಕ್ಕೀಡಾಗಿ ಕಂದಕದಲ್ಲಿ ಉರುಳಿ ಬಿದ್ದಿದೆ.

Screenshot

ಮಂಗಳವಾರ ಮುಂಜಾನೆ ಚೋರ್ಲಾ ಘಾಟ ಗುಡ್ಡ ಕುಸಿತದಿಂದಾಗಿ ಟ್ರಕ್ ವೊಂದು ರಸ್ತೆಯಿಂದ ಹೊರಗೆ ಪಲ್ಟಿಯಾಗಿ ಬಿದ್ದಿತು. ಆಗ ವಾಹನ ಸಂಚಾರದಲ್ಲಿ ತಾತ್ಕಾಲಿಕ ಅಡಚಣೆ ಉಂಟಾಯಿತು. ಅದೃಷ್ಟವಶಾತ್, ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ ಎನ್ನಲಾಗಿದೆ..

ಸದ್ಯ ರಸ್ತೆಯನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರವನ್ನು ಪುನರಾರಂಭಿಸಲಾಯಿತು.

Screenshot

ಈ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತಗಳಾಗುವ ಸಾಧ್ಯತೆಯಿದ್ದು ಘಟ್ಟ ಪ್ರದೇಶದ ಮೂಲಕ ಪ್ರಯಾಣಿಸುವಾಗ ವಿಶೇಷವಾಗಿ ಭಾರೀ ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದಿರಲು ವಾಹನ ಚಾಲಕರಿಗೆ ಸೂಚಿಸಲಾಗಿದೆ.

Share This Article