ಮಾಂಸದಂಗಡಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು 

khushihost
ಮಾಂಸದಂಗಡಿಯಲ್ಲಿ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು 

ಹುಬ್ಬಳ್ಳಿ : ಮಾಂಸದಂಗಡಿಯಲ್ಲಿಯೇ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಬಾಣತಿಕಟ್ಟೆಯ ಮೆಹಬೂಬ ನಗರದಲ್ಲಿ ನಡೆದಿದೆ.

ಮೃತನನ್ನು ಸವದತ್ತಿ ತಾಲ್ಲೂಕಿನ ಬೆಳವಾಡಿ ಗ್ರಾಮದ ಅಷ್ಫಾಕ ಬೇಪಾರಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಜಗಳ ಮಾಡಿಕೊಂಡು ಹುಬ್ಬಳ್ಳಿಯಲ್ಲಿರುವ ತಮ್ಮ ಸಂಬಂಧಿಯ ಮನೆಗೆ ಬಂದಿದ್ದ, ಸಂಬಂಧಿಕರ ಮಟನ್ ಅಂಗಡಿಯಲ್ಲಿ ರಾತ್ರಿ ಕಳೆಯಲು ಹೋಗಿದ್ದ ಆತ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ.

ಹೊಟ್ಟೆಗೆ ಹಾಗೂ ಕುತ್ತಿಗೆಗೆ ಮಾಂಸ ಕತ್ತರಿಸಲು ಉಪಯೋಗಿಸುವ ಚಾಕುವಿನಿಂದಾದ ಗಾಯಗಳಾಗಿವೆ. ಇದು ತಾನೇ ಮಾಡಿಕೊಂಡದೋ ಆಥವಾ ಕೊಲೆಯೋ ತನಿಖೆಯಿಂದ ಗೊತ್ತಾಗಲಿದೆ.

ಮೃತ ಅಷ್ಫಾಕ ಅವರ ಮಗನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article