ಸಚಿವ ಕತ್ತಿ ನಿಧನ : ಸಂಜೆ 5 ಗಂಟೆಗೆ ಅಂತ್ಯ ಸಂಸ್ಕಾರ 

khushihost
ಸಚಿವ ಕತ್ತಿ ನಿಧನ : ಸಂಜೆ 5 ಗಂಟೆಗೆ ಅಂತ್ಯ ಸಂಸ್ಕಾರ 

ಬೆಳಗಾವಿ:ತೀವ್ರ ಹೃದಯಾಘಾತದಿಂದ ಆಹಾರ ಇಲಾಖೆ ಸಚಿವ ಉಮೇಶ ಕತ್ತಿ(61) ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಉಮೇಶ ಕತ್ತಿ ಅವರ ಸ್ವಗ್ರಾಮವಾದ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಹೊರವಲಯದಲ್ಲಿರುವ ವಿಶ್ವರಾಜ ಸಕ್ಕರೆ ಕಾರ್ಖಾನೆಯಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿದ್ದು, ಮಧ್ಯಾಹ್ನ 3.30ರವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮನೆಯ ಆವರಣದಲ್ಲಿ ಕುಟುಂಬಸ್ಥರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಸಂಜೆ ಐದು ಗಂಟೆಗೆ ಉಮೇಶ ಕತ್ತಿ ಅವರ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಸಚಿವ ಉಮೇಶ ಕತ್ತಿ ನಿಧನದ ಸುದ್ದಿ ತಿಳಿದು ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ ಮಾತನಾಡಿದ ಬೊಮ್ಮಾಯಿ, ಬಾಗೇವಾಡಿಗೆ ಕೊಂಡೊಯ್ದು ಸಂಜೆ 5 ಗಂಟೆಗೆ ಅವರ ತೋಟದಲ್ಲಿ‌ ಅಂತಿಮ ವಿಧಿ ವಿಧಾನ ನಡೆಸಲಾಗುತ್ತೆ. ಸಕಲ ಸರ್ಕಾರಿ ಗೌರವಗಳನ್ನು ನೀಡಲು‌ ನಿರ್ಧರಿಸಿದ್ದೇವೆ. ಬುಧವಾರ ಬೆಳಗಾವಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಎಂದು ಘೋಷಿಸಿದರು.

Share This Article