ಮುಂಬೈ ಫ್ಯಾಷನ್ ಸ್ಟ್ರೀಟನಲ್ಲಿ ಅಗ್ನಿ ಅನಾಹುತ : 12ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾದ ವಿಡಿಯೋ 

khushihost
ಮುಂಬೈ ಫ್ಯಾಷನ್ ಸ್ಟ್ರೀಟನಲ್ಲಿ ಅಗ್ನಿ ಅನಾಹುತ : 12ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾದ ವಿಡಿಯೋ 

ಮುಂಬೈ: ದಕ್ಷಿಣ ಮುಂಬೈನ ಫ್ಯಾಶನ್ ಸ್ಟ್ರೀಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಭವಿಸಿದ್ದು 12 ಕ್ಕೂ ಹೆಚ್ಚು ಅಂಗಡಿಗಳು ಸುಟ್ಟುಹೋಗಿವೆ. ಘಟನೆಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಫ್ಯಾಶನ್ ಸ್ಟ್ರೀಟ್‌ನಲ್ಲಿನ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು 1 ನೇ ಹಂತವಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಬಟ್ಟೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ಯಾಶನ್ ಸ್ಟ್ರೀಟ್ ಬಟ್ಟೆಗಳನ್ನು ಖರೀದಿಸಲು ಜನಪ್ರಿಯ ಮಾರುಕಟ್ಟೆಯಾಗಿದೆ ಮತ್ತು ಇದು ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ಬಹಳ ಹತ್ತಿರದಲ್ಲಿದೆ.

ಸ್ಥಳದಲ್ಲಿ ಪರಿಸ್ಥಿತಿ ಸರಿಯಾಗುವವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಮುಂಬೈ ಸಂಚಾರ ಪೊಲೀಸರು ತಿಳಿಸಿದ್ದಾರೆ.

Share This Article