ದುಡ್ಡು ಕೊಟ್ರೆ ತಗೊಳ್ಳಿ, ವೋಟ್ ಮಾತ್ರ ಸಿದ್ದರಾಮಯ್ಯಗೆ ಹಾಕಿ -ಕಾಗಿನೆಲೆ ಶ್ರೀ 

khushihost
ದುಡ್ಡು ಕೊಟ್ರೆ ತಗೊಳ್ಳಿ, ವೋಟ್ ಮಾತ್ರ ಸಿದ್ದರಾಮಯ್ಯಗೆ ಹಾಕಿ -ಕಾಗಿನೆಲೆ ಶ್ರೀ 

ಹಾಸನ: ನಿಮ್ಮ ಬಳಿ ಯಾರೇ ಬಂದು ದುಡ್ಡು ಕೊಡಲಿ, ಬೇಡ ಎನ್ನದೇ ತೆಗೆದುಕೊಳ್ಳಿ. ಆದರೆ, ವೋಟ್​ ಮಾತ್ರ ಸಿದ್ದರಾಮಯ್ಯನವರಿಗೇ ಹಾಕಿ. ಎಂದು ಕಾಗಿನೆಲೆ ಶ್ರೀಗಳು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಮಾತನಾಡಿದ ಅವರು, ಈಗಿನ ವಿದ್ಯಮಾನಕ್ಕೆ ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ರೀತಿ ಯಾರಾದರೂ ಇದ್ರೆ ಅದು ಸಿದ್ದರಾಮಯ್ಯ ಮಾತ್ರ.

ಪ್ರತಿಪಕ್ಷ ನಾಯಕರಾದ ಅವರು ಇಲ್ಲದಿದ್ದರೆ ನಮ್ಮ ಸಮಾಜಕ್ಕೆ ಯಾವುದೇ ರಾಜಕೀಯ ಬಲ ಸಿಗುವುದಿಲ್ಲ. ಬೇರೆ ಪಕ್ಷದವರು ನಿಮ್ಮನ್ನು ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಸಿದ್ದರಾಮಯ್ಯನವರನ್ನು ತುಳಿಯುವ ಪ್ರಯತ್ನ. ಇವರು ಏನಾದ್ರೂ ಕೆಳಕ್ಕೆ ಹೋದ್ರೆ ನೀವು ಪಾತಾಳಕ್ಕೆ ಹೋಗ್ತೀರಿ ಅಂತಾನೆ ಅರ್ಥ, ಇದನ್ನು ಮರೆಯಬೇಡಿ ಎಂದಿದ್ದಾರೆ.

Share This Article