ಪಬ್ಲಿಕ್‌ ಟಾಯ್ಲೆಟ್‌ ಬಳಕೆ: ಹಣ ಕೇಳಿದ್ದಕ್ಕೆ ಕೊಲೆ

khushihost
ಪಬ್ಲಿಕ್‌ ಟಾಯ್ಲೆಟ್‌ ಬಳಕೆ: ಹಣ ಕೇಳಿದ್ದಕ್ಕೆ ಕೊಲೆ

ಮುಂಬೈ, ೧೬- ಸಾರ್ವಜನಿಕ ಶೌಚಾಲಯ ಬಳಕೆ ಮಾಡಿ, ಹಣ ಪಾವತಿಸುವಂತೆ ಕೇಳಿದ ಸಿಬ್ಬಂದಿಯನ್ನೇ ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ದಾದರ್‌ನ ಬಸ್ ನಿಲ್ದಾಣದ ಮುಂಭಾಗದಲ್ಲಿ ಇರುವ ಸಾರ್ವಜನಿಕ ಶೌಚಾಲಯದ ಆವರಣದಲ್ಲಿ ಗುರುವಾರ ರಾತ್ರಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಆರೋಪಿ ರಾಹುಲ್‌ ಪವಾರ‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶೌಚಾಲಯ ಬಳಕೆ ಮಾಡಿದ ಬಳಿಕ ಆರೋ‍ಪಿಯು ಹಣ ಪಾವತಿ ಮಾಡದೆ ತೆರಳಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಶೌಚಾಲಯ ಸಿಬ್ಬಂದಿ ವಿಶ್ವಜಿತ‌ ತಡೆದಿದ್ದಾರೆ. ಹಣ ಪಾವತಿ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆದಿದ್ದು ರಾಹುಲ್‌ ಚಾಕು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ.

ವಿಶ್ವಜೀತ‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾತುಂಗಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article