NIA ದಾಳಿ : ಎಸ್​​ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಬಂಧನ 

1 week ago 22

spot_img

For Breaking News Download App

ಉತ್ತರಕನ್ನಡ: ಜಿಲ್ಲೆಯ ಶಿರಸಿಯಲ್ಲೂ ಕೂಡ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್​​ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ ಎಂಬಾತನನ್ನು ಬಂಧಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯ ಪೊಲೀಸರು , ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಸುಮಾರು 6 ಗಂಟೆಯ ವೇಳೆಗೆ ಈತನ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

‌ಅಬ್ದುಲ್ ಜೊತೆ ಅಲ್ಲೇ ಸಮೀಪದಲ್ಲಿದ್ದ ಆತನ ತಮ್ಮನ ಮನೆಯ ಮೇಲೂ ಶೋಧ ನಡೆದಿದೆ. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಅಬ್ದುಲ್ ಬಂಧನ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ.

For Breaking News Download App

Read Entire Article