ಶಿರಸಿಯಲ್ಲೂ ಕೂಡ ಎನ್‌ಐಎ ಅಧಿಕಾರಿಗಳು ದಾಳಿ : ಓರ್ವ ವಶಕ್ಕೆ 

khushihost
ಶಿರಸಿಯಲ್ಲೂ ಕೂಡ ಎನ್‌ಐಎ ಅಧಿಕಾರಿಗಳು ದಾಳಿ : ಓರ್ವ ವಶಕ್ಕೆ 

ಶಿರಸಿ, ೨೨-: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲೂ ಕೂಡ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸ್​​ಡಿಪಿಐ ಮುಖಂಡ ಅಜೀಜ ಅಬ್ದುಲ್ ಶುಕುರ್ ಹೊನ್ನಾವರ ಅವರನ್ನು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಸ್ಥಳೀಯ ಪೊಲೀಸರು , ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಿದ್ದರು.

ಸುಮಾರು 6 ಗಂಟೆಯ ವೇಳೆಗೆ ಇವರ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

‌ಅಬ್ದುಲ್ ಜೊತೆ ಅಲ್ಲೇ ಸಮೀಪದಲ್ಲಿದ್ದ ಆತನ ತಮ್ಮನ ಮನೆಯ ಮೇಲೂ ಶೋಧ ನಡೆದಿದೆ. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಅಬ್ದುಲ್ ಬಂಧನ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ.

 

 

Share This Article