ಎನ್ಐಎ ದಾಳಿ : ನಾಲ್ವರು ವಶಕ್ಕೆ 

khushihost
ಎನ್ಐಎ ದಾಳಿ : ನಾಲ್ವರು ವಶಕ್ಕೆ 

ಹುಬ್ಬಳ್ಳಿ :ರಾಜ್ಯದ ಹಲವಡೆ ಬೆಳ್ಳಂಬೆಳಗ್ಗೆ ಎನ್ ಐಎ ಅಧಿಕಾರಿಗಳು ಮತ್ತೆ ದಾಳಿ ನಾಲ್ವರನ್ನು ಬಂಧಿಸಿದ್ದಾರೆ. ಹಳೇ‌ ಹುಬ್ಬಳ್ಳಿಯ ನುರಾನಿ ಪ್ಲಾಟ್‌ನಲ್ಲಿರುವ ಎಸ್‌ಡಿಪಿಐ ಮುಖಂಡ ಇಸ್ಮಾಯಿಲ್ ನಾಲಾ‌ಬಂದ ಮನೆ ಮೇಲೆ‌ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗಿನ ಜಾವ ನಾಲ್ಕು ಗಂಟೆಗೆ ಎನ್‌ಐಎ ಅಧಿಕಾರಿಳು ದಾಳಿ ನಡೆಸಿದ್ದಾರೆ. ಒಟ್ಟು 10 ಜನ ಅಧಿಕಾರಿಗಳ ತಂಡದಿಂದ ದಾಳಿ ನಡೆಸಲಾಗಿದೆ.

ಮನೆಯಲ್ಲಿ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳು ಮರಳಿ‌ದ್ದಾರೆ ಅಂತ ತಿಳಿದು ಬಂದಿದೆ. ದಕ್ಷಿಣ ಕನ್ನಡದ ಬೆಳ್ಳಾರೆ ಗ್ರಾಮಪಂಚಾಯಿತಿ ಸದಸ್ಯ ಇಕ್ಬಾಲ್, ಸುಳ್ಯದ ಇಬ್ರಾಹಿಂ, ಎಸ್ ಡಿ ಪಿಐ ರಾಜ್ಯ ಕಾರ್ಯದರ್ಶಿ ಶೆಫಿ ಬೆಳ್ಳಾರೆಯನ್ನು ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.

Share This Article