ಸರ್ಕಾರ ಉರುಳಿಸುವ ಶಕ್ತಿ ರಮೇಶ ಜಾರಕಿಹೊಳಿಗೆ ಮಾತ್ರ ಇದೆ : ಸತೀಶ ಜಾರಕಿಹೊಳಿ

khushihost
ಸರ್ಕಾರ ಉರುಳಿಸುವ ಶಕ್ತಿ ರಮೇಶ ಜಾರಕಿಹೊಳಿಗೆ ಮಾತ್ರ ಇದೆ : ಸತೀಶ ಜಾರಕಿಹೊಳಿ

ಬೆಳಗಾವಿ: ರಮೇಶ ಜಾರಕಿಹೊಳಿ ಅವರಿಗೆ ಮಾತ್ರ ಸರ್ಕಾರ ಉರುಳಿಸುವ ಶಕ್ತಿ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ ನಗರದಲ್ಲಿ ನಡೆದ ಉಪ್ಪಾರ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರು ಇನ್ನೊಮ್ಮೆ ಸರ್ಕಾರ ಉರಳಿಸುವ ಪ್ರಯತ್ನ ಮಾಡಲಿ ಎಂದು ನಾವೆಲ್ಲ ಪ್ರಾರ್ಥಿಸೋಣ ಎಂದರು.

ಜಾರಕಿಹೊಳಿ ಸಹೋದರಿಗೆ ಸರ್ಕಾರ ಉರುಳಿಸುವ ಶಕ್ತಿ ಇದೆ ಎಂದು ಹೇಳ್ತಾರೆ. ರಾಜಕಾರಣದಲ್ಲಿ ನಾಲ್ವರು ಸಹೋದರರಿದ್ದರೆ ನಾಲ್ವರೂ ಒಂದೇ ಎಂದು ಭಾವಿಸಬಾರದು ಎಂದರು.

ನಾಲ್ವರು ಸಹೋದರರ ಕೆಲಸವೂ ಬೇರೆ ಬೇರೆ ಇದೆ, ಯಾರೂ ಗೊಂದಲ ಮಾಡಿಕೊಳ್ಳಬಾರದು. ಉಳಿದ ನಾಲ್ವರು ಸಹೋದರರು ಸರ್ಕಾರ ಉರುಳಿಸುವುದರ ಭಾಗವಾಗುವುದಿಲ್ಲ. ರಮೇಶ ಜಾರಕಿಹೊಳಿ ಅವರಿಗೆ ಮಾತ್ರ ಸರ್ಕಾರ ಉರಳಿಸುವ ಶಕ್ತಿ ಇದೆ. ಅವರು ಇನ್ನೊಮ್ಮೆ ಸರ್ಕಾರ ಉರಳಿಸುವ ಪ್ರಯತ್ನವನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.

Share This Article